ಧರ್ಮಸ್ಥಳದಲ್ಲಿ 26ನೇ ವರ್ಷದ ಭಜನಾ ತರಬೇತಿ ಕಮ್ಮಟ ಸಮಾರೋಪ ಸಮಾರಂಭ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಸೆ.22ರಿಂದ ಪ್ರಾರಂಭವಾದ 26ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ ಸೆ.29ರಂದು ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣಪುರ ಕುಂದಗೋಳ ತ್ರಿವಿಧ ದಾಸೋಹಿ ಶ್ರೀ ಬಸವಣ್ಣಜ್ಜ ಸ್ವಾಮೀಜಿ ಆಶೀರ್ವಚನ ಗೈದರು. ಮಾಣಿಲ ಶ್ರೀ ಧಾಮ ಶ್ರೀ ಮೋಹನದಾಸ ಸ್ವಾಮೀಜಿ, ದ.ಕ. ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಧರ್ಮಸ್ಥಳ ಡಾ.ಹೇಮಾವತಿ ವಿ.ಹೆಗ್ಗಡೆ, ಧರ್ಮೋತ್ತನ ಟ್ರಸ್ಟ್ ಅಧ್ಯಕ್ಷರು ಡಿ.ಸುರೇಂದ್ರ ಕುಮಾರ್, ಧರ್ಮಸ್ಥಳ ಡಿ. ಹರ್ಷೇದ್ರ ಕುಮಾರ್, ಯೋಜನೆಯ ಬಿ. ಸಿ. ಟ್ರಸ್ಟ್ ಟ್ರಷ್ಟಿ ನಾಗೇಶ್ವರ ರಾವ್, ಎಸ್ ಡಿ. ಎಂ. ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್.ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಯೋಜನೆಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಹೆಚ್.ಮಂಜುನಾಥ್ ಉಪಸ್ಥಿತರಿದ್ದರು.

ಯೋಜನೆಯ ಮತ್ತು ಕ್ಷೇತ್ರದ ವಿವಿಧ ವಿಭಾಗದ ಮುಖ್ಯಸ್ಥರು, ವಿವಿಧ 500 ಭಜನಾ ಮಂಡಳಿಗಳ 7000 ಭಜಕರು, ಭಕ್ತರು ಹಾಜರಿದ್ದರು.ಹೇಮಾವತಿ ವಿ. ಹೆಗ್ಗಡೆಯವರ ಪರಿಕಲ್ಪನೆಯಲ್ಲಿ ವಿದುಷಿ ಚೈತ್ರ ಮತ್ತು ತಂಡದಿಂದ ನೃತ್ಯ ರೂಪಕ ಭಜನಾ ಪರಿಷತ್ತಿನ ಮಾದರಿ ಭಜನಾ ಮಂಡಳಿಗಳಿಗೆ ಸಾಧನಾ ಸನ್ಮಾನ ನಡೆಯಿತು.

ಭಜನಾ ಕಮ್ಮಾಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ವೀರು ಶೆಟ್ಟಿ ವರದಿ ವಾಚಿಸಿದರು. ಕೋಶಾಧಿಕಾರಿ ಧನ್ಯಕುಮಾರ್ ವಂದಿಸಿದರು. ಸದಸ್ಯ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಮೊದಲು ವಿವಿಧ ಭಜನಾ ಮಂಡಳಿ ಭಜನೆಯೊಂದಿಗೆ ಮೆರವಣಿಗೆ ನಡೆಯಿತು.

LEAVE A REPLY

Please enter your comment!
Please enter your name here