ಪೆರ್ಲ-ಶಿಬಾಜೆ ಗ್ರಾಮಸ್ಥರಿಂದ ಶ್ರಮದಾನ ಮೂಲಕ ರಸ್ತೆ ಬದಿ ಗಿಡ ಗಂಟಿಗಳ ತೆರವು

0

ಶಿಬಾಜೆ: ಅರಸಿನಮಕ್ಕಿಯಿಂದ ಶಿಬಾಜೆವರೆಗೆ ರಸ್ತೆ ಬದಿ ಗಿಡ ಗಂಟಿಗಳ ತೆರವು ಕಾರ್ಯವನ್ನು ಪೆರ್ಲ ಮತ್ತು ಶಿಬಾಜೆಯ ಗ್ರಾಮಸ್ಥರು ಸೇರಿ ನಡೆಸಿದರು.

ಸುಮಾರು 7 ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ಹಲವಾರು ಅಪಾಯಕಾರಿ ತಿರುವುಗಳು ಇದ್ದು ಮಳೆಗಾಲದಲ್ಲಿ ಬೆಳೆದ ಗಿಡ ಗಂಟಿಗಳಿಂದ ಸಂಚಾರಕ್ಕೆ ಸಮಸ್ಯೆ ಆಗುತ್ತಿತ್ತು ಸುಮಾರು 50ಕ್ಕಿಂತಲೂ ಜನ ಊರಿನ ಹಿರಿಯರು, ಯುವಕರು ಶ್ರಮದಾನದಲ್ಲಿ ಭಾಗವಹಿಸಿ ಸಂಚಾರಕ್ಕೆ ಯೋಗ್ಯ ರೀತಿಯಲ್ಲಿ ರಸ್ತೆಯನ್ನು ಸಿದ್ದಪಡಿಸಿದ್ದು, ಶ್ರಮದಾನ ಕಾರ್ಯಕ್ಕೆ ಮೊಂಟೆತಡ್ಕ ದೇವಳದ ವತಿಯಿಂದ ಕಳೆ ತೆಗೆಯುವ ಯಂತ್ರಕ್ಕೆ ಉಚಿತವಾಗಿ ಪೆಟ್ರೋಲ್ ನೀಡಿದ್ದು, ಶಿಬಾಜೆ ಗ್ರಾಮ ಪಂಚಾಯತ್ ನಿಂದಲೂ ಸಹಕಾರ ನೀಡುವ ಭರವಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here