ಬೆಳ್ತಂಗಡಿ: ಆದಿಚುಂಚನಗಿರಿ ಮಠ ಮಾನ್ಯವಾಗಿಸಿಕೊಂಡು ದ.ಕ.ಜಿಲ್ಲಾ ಗೌಡರ ಸಂಘದಡಿ 6 ತಾಲೂಕಿಗೆ ಒಳಪಟ್ಟು ಎಲ್ಲ ಭಾಷೆ ಮಾತಾಡುವ ಗೌಡ ಸಮುದಾಯ ಸೇರಿ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಸ್ಥಾಪಿಸಿರುವುದು ಗೌರವಾರ್ಹ. ಜಿಲ್ಲೆಯ ಸುಮಾರು 3.90 ಲಕ್ಷಕ್ಕೂ ಅಧಿಕ ಗೌಡ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸ್ಥಾಪಿಸಿರುವ ಟ್ರಸ್ಟ್ ಉದ್ದೇಶ ಸ್ತುತ್ಯರ್ಹ ಎಂದು ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಡಿ.ಬಿ.ಬಾಲಕೃಷ್ಣ ಗೌಡ ಹೇಳಿದರು.
ನೂತನವಾಗಿ ಅಸ್ತಿತ್ವಕ್ಕೆ ಬಂದ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ವತಿಯಿಂದ ಸೆ.23ರಂದು ಬೆಳ್ತಂಗಡಿ ಸಿವಿಸಿ ಹಾಲ್ ನಲ್ಲಿ ನಡೆದ ಜಿಲ್ಲಾ ಸದಸ್ಯತ್ವ ಅಭಿಯಾನ ಸಭೆ ಉದ್ಘಾಟಿಸಿ ಮಾತನಾಡಿದರು.
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಮಾತನಾಡಿ, ಆದಿಚುಂಚನಗಿರಿ ಸ್ವಾಮಿಗಳ ಆಶಯದಂತೆ ದ.ಕ.ಜಿಲ್ಲೆಯಲ್ಲಿ ಎಲ್ಲ ಒಕ್ಕಲಿಗ ಗೌಡ ಸಮುದಾಯ ಒಟ್ಟಾಗಿ ಸಾಗಬೇಕೆಂಬ ನೆಲೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ರಚಿಸಿದೆ ಎಂದು ಹೇಳಿದರು.
ಸ್ಥಾಪಕ ಟ್ರಸ್ಟಿ ವಿಜಯ ಗೌಡ ವೇಣೂರು ಸದಸ್ಯತ್ವದ ಕುರಿತು ಮಾತನಾಡಿ, ಆದಿಚುಂಚನಗಿರಿ ಸ್ವಾಮಿಗಳ ಆಶೀರ್ವಾದದಿಂದ ಡಿ.ಬಿ.ಬಾಲಕೃಷ್ಣ ಗೌಡ ಅವರ ಜಿಲ್ಲಾ ಅಧ್ಯಕ್ಷತೆಯ ಊರ್ಜಿತ ಸಮಿತಿಯಡಿ ಬರುವ ಗೌಡ ಸಮುದಾಯದ ಒಟ್ಟು 18 ಪಂಗಡಗಳು ಸೇರಿ ಈಗಾಗಲೆ ಟ್ರಸ್ಟ್ ನಲ್ಲಿ 75 ಮಂದಿ ಸ್ಥಾಪಕ ಟ್ರಸ್ಟಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟ್ರಸ್ಟ್ ನಡಿ 10 ಸಾವಿರ ಸದಸ್ಯತ್ವ ಮಾಡುವ ಉದ್ದೇಶವಿದೆ ಎಂದು ಹೇಳಿದರು.
ಸಮಿತಿ ಕಾರ್ಯಾಧ್ಯಕ್ಷ ಶ್ರೀನಿವಾಸ ಗೌಡ ಬೆಳಾಲು ಅಧ್ಯಕ್ಷತೆ ವಹಿಸಿ ಟ್ರಸ್ಟ್ ನ ಉದ್ದೇಶದ ಬಗ್ಗೆ ತಿಳಿಸಿದರು.
ಜಿಲ್ಲಾ ಉಪಾಧ್ಯಕ್ಷ ಭಾಸ್ಕರ್ ದೇವಸ್ಯ, ಸಮಿತಿ ಕಾರ್ಯಾಧ್ಯಕ್ಷ ಜಯಂತ ಗೌಡ, ಕಾರ್ಯದರ್ಶಿ ಭರತ್ ಬಂಗಾಡಿ, ಗೌರವಾಧ್ಯಕ್ಷ ರಂಜನ್ ಜಿ.ಗೌಡ, ನಿರ್ದೇಶಕಿ ಸೌಮ್ಯಲತಾ, ಟ್ರಸ್ಟಿ ದಾಮೋದರ್ ಗೌಡ ಸುರುಳಿ ಉಪಸ್ಥಿತರಿದ್ದರು.
ಸಮುದಾಯದ ಬಾಲಕೃಷ್ಣ ಗೌಡ ಕೇರಿಮಾರು ಹಾಗೂ ಮೋನಪ್ಪ ಗೌಡ ಬಜಿರೆ ಅವರಿಗೆ ಸಾಂಕೇತಿಕವಾಗಿ ಸದಸ್ಯತ್ವ ಅರ್ಜಿ ಫಾರಂ ವಿತರಿಸಲಾಯಿತು.
ಸ್ಥಾಪಕ ಟ್ರಸ್ಟಿ ವಸಂತ ಗೌಡ ಮರಕಡ ಸ್ವಾಗತಿಸಿದರು.ನವೀನ್ ಗೌಡ, ಸತೀಶ್ ಮನ್ನಡ್ಕ ನಿರೂಪಿಸಿದರು. ಕೋಶಾಧಿಕಾರಿ ಸೂರಜ್ ಒಳಂಬ್ರ ವಂದಿಸಿದರು. ವಿದ್ಯಾಶ್ರೀನಿವಾಸ ಗೌಡ ಪ್ರಾರ್ಥಿಸಿದರು.