ಉಜಿರೆ: ಉಜಿರೆ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ 2023-24ನೇ ಸಾಲಿನ ಸಾಮಾನ್ಯ ಸಭೆಯು ಉಜಿರೆಯ ಎಸ್.ಕೆ ಮೆಮೋರಿಯಲ್ ಹಾಲ್‌ನಲ್ಲಿ ಸೆ. 21ರಂದು ನಡೆಯಿತು.
ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್ ಮಾತನಾಡಿ ಸಂಘ ಸ್ಥಾಪನೆಗೊಂಡು 13 ವರ್ಷಗಳನ್ನು ಪೂರೈಸಿ ಇದೀಗ 14ನೇ ವರ್ಷಕ್ಕೆ ಪಾದಾರ್ಪನೆಗೊಂಡಿದೆ.ಆಡಳಿತ ಮಂಡಳಿಯವರ ಸಹಕಾರ, ಸದಸ್ಯರ ರಚನಾತ್ಮಕ ಸಹಕಾರ ಮತ್ತು ಸಿಬ್ಬಂದಿ ವರ್ಗದವರ ವೃತ್ತಿಪರತೆಯಿಂದಾಗಿ ಇದು ಸಾಧ್ಯವಾಗಿದೆ ಎಂದು ಹೇಳಿದರು. ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕಾಗಿ ನಾನು ನಿಮಗೆಲ್ಲರಿಗೂ ಋಣಿಯಾಗಿದ್ದೇನೆ ಎಂದು ಹೇಳಿದ ಅವರು ಸಂಘದಲ್ಲಿ ಒಟ್ಟು 3411ಸದಸ್ಯರನ್ನೊಳ ಗೊಂಡು ರೂ. 200ಕೋಟಿ ವ್ಯವಹಾರ ನಡೆಸಿ 1ಕೋಟಿ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ. 17 ಡಿವಿಡೆಂಡ್ ಘೋಷಿಸಿದರು.
2023-24ನೇ ಸಾಲಿನಲ್ಲಿ ವೈದ್ಯಕೀಯ ನಿಧಿ, ಸಾರ್ವಜನಿಕ ಹಿತಾಸಕ್ತಿ ನಿಧಿ ಮತ್ತು ಮರಣೋತ್ತರ ನಿಧಿಗಳಿಂದ ಸಹಾಯಧನ, ಸಾಧಕರಿಗೆ ಸನ್ಮಾನ, ಪಿಗ್ಮಿ ಸಂಗ್ರಾಹಕರಿಗೆ ಉತ್ತೇಜಕ ಮೊತ್ತ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗಿದೆ. ನಮ್ಮ ಸಂಘದ ಎಲ್ಲಾ ವ್ಯವಹಾರಗಳಲ್ಲಿ ಕಾನೂನು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇದರಿಂದಾಗಿ ಸಂಘ ಸಾಲ ನೀಡುವಿಕೆ ಮತ್ತು ವಸೂಲಾತಿಯಲ್ಲಿ ಗರಿಷ್ಠ ಸಾಧನೆ ಮಾಡಲು ಸಾಧ್ಯವಾಗಿದೆ. ನಮ್ಮ ಈ ಅನುಗ್ರಹ ಸಹಕಾರ ಸಂಘ ಜನರ ಪಾಲ್ಗೊಳ್ಳುವಿಕೆ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ.
ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸಲಾಗಿದ್ದು ಮೂಡುಬಿದ್ರೆಯಲ್ಲಿ ಸಂಘ ಉತ್ತಮ ಸಾಧನೆ ಮಾಡಿದೆ. ಬೆಳ್ತಂಗಡಿ ಶಾಖೆಯಲ್ಲಿ 20ಕೋಟಿ ಠೇವಣಿ ಸಂಗ್ರಹಿಸಿ 14 ಕೋಟಿ ಸಾಲ ವಿತರಿಸಲಾಗಿದೆ. 25ಲಕ್ಷ ಲಾಭ ಗಳಿಸಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್ ಹೇಳಿದರು.
ಉಪಾದ್ಯಕ್ಷ ಅನಿಲ್ ಪ್ರಕಾಶ್ ಡಿಸೋಜಾ, ನಿರ್ದೇಶಕರುಗಳಾದ ಸಿಲ್ವೆಸ್ಟರ್ ಮೋನಿಸ್, ಸುನಿಲ್ ಸಂತೋಷ್ ಮೊರಾಸ್, ಅರುಣ್ ಸಂದೇಶ್ ಡಿಸೋಜಾ, ಗೀತಾ ಫೆಲ್ಸಿಯಾನಾ ಡಿಸೋಜ, ಫೆಲಿಕ್ಸ್ ಡಿಸೋಜಾ, ವಲೇರಿಯನ್ ಕ್ರಾಸ್ತಾ, ಮೇಬುಲ್ ಪ್ಲಾವಿಯಾ ಲೋಬೊ, ಉಪಸ್ಥಿತರಿದ್ದರು.
ಸುನಿಲ್ ಸಂತೋಷ್ ಮೊರಾಸ್ ಸನ್ಮಾನಿತರನ್ನು ಪರಿಚಯಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕಿ ಮೇಬುಲ್ ಪ್ಲಾವಿಯಾ ಲೋಬೊ ಸ್ವಾಗತಿಸಿದರು. ನಿರ್ದೇಶಕರಾದ ವಲೇರಿಯನ್ ಕ್ರಾಸ್ತಾ ವಂದಿಸಿದರು. ಗೀತಾ ಫೆಲ್ಸಿಯಾನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಎಲ್ ಎಲ್ ಬಿ ಪದವಿ ಪಡೆದ ವಿಮುಕ್ತಿ ನಿರ್ದೇಶಕ ವಂ. ಫಾ. ವಿನೋದ್ ಮಸ್ಕರೇನಸ್, 36ವರ್ಷ ಸಹಕಾರಿ ಕ್ಷೇತ್ರದಲ್ಲಿ ಸೇವೆ ನೀಡಿ ನಿವೃತ್ತಿ ಹೊಂದಿದ ಶಂಕರ್ ಆರ್ ಫಟವರ್ಧನ್, ಸಿ. ಎ. ಪರೀಕ್ಷೆ ಯಲ್ಲಿ ತೇರ್ಗಡೆಯಾದ ಜೊನಿಟ ಡಿಸೋಜ, ಮಡಂತ್ಯಾರು ಕ್ರೀಡಾ ಸಾಧಕಿ ಡ್ಯಾಪ್ನಿ ಮಿಸ್ಕಿತ್, ಕರಾಟೆ ಸಾಧಕ ಪ್ಲೋಯ್ಡ್ ಮಿಸ್ಕಿತ್, ಸಂಘದದಿಂದ ನಿವೃತ್ತಿ ಪಡೆದು ವಿದೇಶಕ್ಕೆ ತೆರಳುವ ಸಿಬಂದಿ ರವೀನಾ ಕ್ರಾಸ್ತಾ ಇವರನ್ನು ಸನ್ಮಾನಿಸಲಾಹಿತು.ಆರ್ಥಿಕವಾಗಿ ಇಂದುಳಿದ ವಿದ್ಯಾರ್ಥಿಗಳಿಗೆ, ಪಿಗ್ಮಿ ಸಂಗ್ರಾಹಕರಿಗೆ, ಬಡವರ ಗ್ರಹ ನಿರ್ಮಾಣ ಆರ್ಥಿಕ ನೆರವು ವಿತರಿಸಲಾಹಿತು. ಠೇವಣಿ ಸಂಗ್ರಹಣೆ ಮಾಡುವಲ್ಲಿ ಪ್ರಥಮ ಸ್ಥಾನ ಪಡೆದ ಪ್ರವೀಣ್ ಪಾಯ್ಸ್, ದ್ವಿತೀಯ ಸ್ಥಾನ ಪಡೆದ ಪ್ರವೀಣ್ ಪಿಂಟೊ ಇವರನ್ನು ಗೌರವಿಸಲಾಯಿತು.