

ಬೆಳಾಲು: ಸುರತ್ಕಲ್ ವಿದ್ಯಾದಾಯಿನಿ ಪ್ರೌಢ ಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ‘ಮಕ್ಕಳ ಧ್ವನಿ’ ಸೆ.14ರಂದು ನಡೆದ ಕಾರ್ಯಕ್ರಮದಲ್ಲಿ ಬೆಳಾಲು ಶ್ರೀ ಧ.ಮಂ.ಪ್ರೌಢ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಾದ ತ್ರಿಶಾ ಜೈನ್, ರಕ್ಷಾ ಎನ್, ಪುಣ್ಯಶ್ರೀ, ಅಂಕಿತ, ಆಶಾ, ಸೃಷ್ಟಿ, ಸುಚಿತ್ರ ಇವರು ಕವನಗೋಷ್ಠಿ ಮತ್ತು ಕಥಾಗೋಷ್ಠಿಯಲ್ಲಿ ಭಾಗವಹಿಸಿ, ತಮ್ಮ ಸ್ವ ರಚಿತ ಕವನ ಮತ್ತು ಕಥೆಯನ್ನು ವಾಚಿಸಿದರು.
ಶಿಕ್ಷಕ ಸುಮನ್ ಯು ಎಸ್ ಇವರು ಮಾರ್ಗದರ್ಶನ ನೀಡಿದ್ದರು.