

ಧರ್ಮಸ್ಥಳ: ಪುತ್ತೂರು ಸುಧಾನ ವಸತಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಧರ್ಮಸ್ಥಳ ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಚಿನ್ಮಯ್ ರೈ, ಅಂಜನ ರೋಜ್, ವರ್ಷ, 9ನೇ ತರಗತಿಯ ಧನ್ಯಶ್ರೀ, ಶ್ರಾವ್ಯ, ಆದರ್ಶ್ ಹಾಗೂ ಎಂಟನೇ ತರಗತಿಯ ಅಪೂರ್ವ ಇವರನ್ನೊಳಗೊಂಡ ತಂಡವು ದ್ವಿತೀಯ ಸ್ಥಾನ ಗಳಿಸಿರುತ್ತದೆ.

ಈ ನಾಟಕವನ್ನು ಸಹ ಶಿಕ್ಷಕಿ ಆಶಾ ರವರು ಬರೆದು ನಿರ್ದೇಶಿಸಿರುತ್ತಾರೆ. ಹಾಗು ಶಾಲಾ ಮುಖ್ಯಶಿಕ್ಷಕಿ ಪರಿಮಳ ಎಂ ವಿ ರವರು ಮಾರ್ಗದರ್ಶನವನ್ನು ನೀಡಿರುತ್ತಾರೆ.ಹಾಗೆಯೇ ಸಹಶಿಕ್ಷಕಿ ಆಶಾ ರವರಿಗೆ ಉತ್ತಮ ರಚನೆಕಾರ ಪ್ರಶಸ್ತಿ ಹಾಗು ಹತ್ತನೇ ತರಗತಿಯ ಚಿನ್ಮಯಿ ರೈಗೆ ಉತ್ತಮ ನಟಿ ಪ್ರಶಸ್ತಿಯು ಲಭಿಸಿದೆ.