

ಬೆಳ್ತಂಗಡಿ: ಮಹಿಳಾ ಗ್ರಾಹಕರ ಸಹಕಾರಿ ಸಂಘದ 47ನೇ ಸಾಲಿನ ಮಹಾಸಭೆಯು ಸೆ.13ರಂದು ನಡೆಯಿತು.
ಸಂಘದ ಅಧ್ಯಕ್ಷೆ ಉಮಾ.ಆರ್ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸದಸ್ಯರ ಗ್ರಾಹಕರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಸಂಘವು ಸತತ ಪ್ರಗತಿ ಕಾಣುತ್ತಿದೆ.ಮಧ್ಯಮಾವದಿ ಸಾಲ, ಆಭರಣ ಅಡಮಾನ ಸಾಲ ನೀಡಲು ಸದಸ್ಯರ ಸಹಕಾರ ಅಗತ್ಯವಿದೆ ಎಂದರು.ನಿರ್ದೇಶಕಿ ಮೇದಿನಿ ಡಿ.ಗೌಡರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ಸಂಘದ ನಿವೃತ ನೌಕರ ಕೆ.ಪದ್ಮನಾಭರನ್ನು ಸನ್ಮಾನಿಸಿದರು.
ಉಪಾಧ್ಯಕ್ಷೆ ರಶ್ಮಿ ಪಟವರ್ಧನ್, ನಿರ್ದೇಶಕರಾದ ಪಿಜಿ ಲಲಿತ, ರುಕ್ಮಿಣಿ, ಸವಿತಾ ಜಯದೇವ್, ನೇತ್ರಾ ಅಶೋಕ್, ಹೇಮಾ, ವೀಣಾ ವಿ.ಕುಮಾರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ನಿರ್ದೇಶಕಿ ತ್ರಿಶಲಾ ಜೈನ್ ಸ್ವಾಗತಿಸಿ, ಸಿಬ್ಬಂದಿ ಯೋಗಿನಿ ಎನ್ ವರದಿ ವಾಚಿಸಿದರು.ಸಿಬ್ಬಂದಿ ಕುಶಲಾ ಲೆಕ್ಕ ಪತ್ರ ಮಂಡಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷತಾ ಅಂದಾಜು ಆಯ-ವ್ಯಯ ಪಟ್ಟಿ ಮಂಡಿಸಿದರು.
ನಿರ್ದೇಶಕಿ ಪ್ರೀತಿ ಆರ್.ರಾವ್ ಕಾರ್ಯಕ್ರಮ ನಿರೂಪಿಸಿದರು.ನಿರ್ದೇಶಕಿ ಉಷಾ ಲಕ್ಷ್ಮಣ ಗೌಡರವರು ವಂದಿಸಿದರು.