ಬೆಳ್ತಂಗಡಿ: ಮರಾಟಿ ನಾಯ್ಕ್ ಸಮುದಾಯದ ಐಕ್ಯತೆ ಹಾಗೂ ಅಭಿವೃದ್ಧಿಗೆ ಮೂಡುಬಿದಿರೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಗದ್ದಿಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮುದಾಯದ ಜನತೆ ಪಾಲ್ಗೊಂಡು ನಮ್ಮ ಸಂಸ್ಕ್ರತಿ, ಸಂಸ್ಕಾರಗಳ ಬಗ್ಗೆ ಅರಿತುಕೊಳ್ಳಬೇಕು. ಉದ್ಯೋಗ ಮೇಳ ಕೂಡ ನಡೆಯಲಿದ್ದು, ಇದರ ಸದುಪಯೋಗಕ್ಕಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ಎಚ್.ಎಲ್. ಹೇಳಿದರು.
ಅವರು ಗುರುವಾಯನಕೆರೆಯ ಸತೀಶ್ ಅವರ ನಿವಾಸ ‘ಸವಿನೆಲೆ’ಯಲ್ಲಿ ಇತ್ತೀಚೆಗೆ ನಡೆದ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿದರು. ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ವಧು – ವರರ ಸಮಾವೇಶ ನವೆಂಬರ್‌ನಲ್ಲಿ ನಡೆಯಲಿದೆ. ಇದರ ಮೂಲಕ ಯುವ ಸಮೂಹ ಎದುರಿಸುತ್ತಿರುವ ವಿವಾಹ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಅರ್ಹರು ನಿಗದಿತ ನಮೂನೆಯಲ್ಲಿ ನೋಂದಣಿ ಮಾಡಬೇಕು ಎಂದರು.
ಗೌರವಾಧ್ಯಕ್ಷ ಕೊರಗಪ್ಪ ನಾಯ್ಕ್, ಗೌರವ ಸಲಹೆಗಾರ ಉಮೇಶ್ ನಾಯ್ಕ್ ಕೇಳ್ತಡ್ಕ, ಕುಮಾರಯ್ಯ ನಾಯ್ಕ, ಉಪಾಧ್ಯಕ್ಷರಾದ ವಸಂತ ನಾಯ್ಕ್, ಪ್ರಭಾಕರ ನಾಯ್ಕ್, ಕಾರ್ಯದರ್ಶಿಗಳಾದ ಪ್ರಸಾದ್ ನಾಯ್ಕ್, ಪವಿತ್ರಾ, ಕೋಶಾಧಿಕಾರಿ ಹರೀಶ್ ಪೆರಾಜೆ, ವಿವಿಧ ವಿಭಾಗಗಳ ಪದಾಧಿಕಾರಿಗಳಾದ ಶ್ರೀನಿವಾಸ ನಾಯ್ಕ್, ರಾಘವೇಂದ್ರ ನಾಯ್ಕ್, ರಾಜೇಶ್ ನಾಯ್ಕ್, ರಜನೀಶ್ ನಾಯ್ಕ್, ಭಾಸ್ಕರ ನಾಯ್ಕ್, ಹರ್ಷಿತ್, ವಿಶಾಲ ಮತ್ತಿತರರು ಉಪಸ್ಥಿತರಿದ್ದರು. ನಿತ್ಯೂಷ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ತಾರನಾಥ ನಾಯ್ಕ್ ಸ್ವಾಗತಿಸಿ, ಸುರೇಶ್ ಎಚ್.ಎಲ್. ವಂದಿಸಿದರು.