ಬೆಳ್ತಂಗಡಿ: ನಾರಾವಿಯಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕಿಯರ ತ್ರೋಬಾಲ್ ಪಂದ್ಯಾವಳಿಯಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಪಂದ್ಯಾವಳಿಗೆ ಆಯ್ಕೆಗೊಂಡು, ಶಾಲೆಗೂ ಹೆತ್ತವರಿಗೂ ಕೀರ್ತಿ ತಂದಿರುತ್ತಾರೆ.
ಭಾಗವಹಿಸಿದ ವಿದ್ಯಾರ್ಥಿಗಳು: 10ನೇ ತರಗತಿಯಿಂದ ಹುನೈದಾ, ಶ್ರೀ ಗೌರಿ, 9ನೇ ತರಗತಿಯಿಂದ ಸಹನಾ ರಾವ್, ನಿಧಿ ಬಾರ್ಯ, ನೇಹಾ, ಪೂಜಿತಾ 8ನೇ ತರಗತಿ ವಿದ್ಯಾರ್ಥಿಗಳಾದ ಪವೀಕ್ಷಾ, ಕನಿಷ್ಕಾ , ಕೃತಿ, ಅನ್ಸೀಫಾ, ಆಕಾಂಕ್ಷಾ , ಪ್ರಣಮ್ಯ. ಉತ್ತಮ ಎಸೆತಗಾರ್ತಿ ಆಗಿ ಹುನೈದಾ ಪ್ರಶಸ್ತಿ ಪಡೆದುಕೊಂಡರು.
ದೈಹಿಕ ಶಿಕ್ಷಕಿ ವಿಂಧ್ಯ ಇವರು ಈ ವಿಜೇತ ತಂಡಕ್ಕೆ ತರಬೇತಿ ನೀಡಿರುತ್ತಾರೆ.
p>