ಉಜಿರೆ: ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಹಿಂದಿ ದಿವಸ ಆಚರಣೆ

0

ಉಜಿರೆ: ಪ್ರತಿಯೊಬ್ಬರು ತನ್ನ ರಾಷ್ಟ ಭಾಷೆಯನ್ನು ಪ್ರೀತಿಸಿ, ಗೌರವಿಸಿ, ಹುಟ್ಟಿದ ಕೂಡಲೇ ಯಾವುದೇ ಭಾಷೆ ಕಲಿತಿರುವುದಿಲ್ಲ ಬೆಳಯುತ್ತಾ ಹೋದಂತೆ ಎಲ್ಲವೂ ಆರ್ಥವಾಗುತ್ತದೆ, ಎಲ್ಲರನ್ನು ಸಹೋದರ ಸಹೋದರಿಯರಂತೆ ನೋಡಿ ಉತ್ತಮ ಭಾತೃತ್ವ ಬೆಳೆಸಿಕೊಳ್ಳಿ ಎಂದು ಧ.ಮಂ ಮಹಾ ವಿದ್ಯಾಲಯ ಉಜಿರೆಯ ಸಹಾಯಕ ಪ್ರಾಧ್ಯಾಪಕರಾದ ಶೃತಿ ಮಣಿ ಕಿರಣ್ ಕರೆಕೊಟ್ಟರು.

ಉಜಿರೆ ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಸೆ.14ರಂದು ನಡೆದ ಹಿಂದಿ ದಿವಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶೃತಿ ಮಣಿ ಕಿರಣ್ ಭಾರತ ಜಾತ್ಯಾತೀತ ರಾಷ್ಟ, ಇಲ್ಲಿ ಹಲವಾರು ಭಾಷೆ ಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಮುಖ್ಯೋಪಾಧ್ಯಾಯ ಕೆ.ಸುರೇಶ್ ಹಿಂದಿ ಭಾಷೆಯ ಮಹತ್ವವನ್ನು ತಿಳಿಸಿದರು. ಹಿಂದಿ ಭಾಷಾ ಶಿಕ್ಷಕ ಮೋನಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು.

8ನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು ವಿದ್ಯಾರ್ಥಿಗಳಾದ ನಯನ್ ಕುಮಾರ್ ಸ್ವಾಗತಿಸಿದರು. ಫಾತಿಮತ್ ಶೈಮಾ ವಂದಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here