ಬೆಳಾಲು: ನಿಂತಿಕಲ್ಲು ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ

0

ಬೆಳಾಲು: ಇಲ್ಲಿಯ ನಿಂತಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಸೆ.10ರಂದು ಪೌಷ್ಟಿಕ ಆಹಾರ ಸಪ್ತಾಹ, ಶಿಕ್ಷಕರ ದಿನಾಚರಣೆ ಹಾಗೂ ಕೃಷ್ಣ ಜನ್ಮಾಷ್ಟಮಿ ದಿನಾಚರಣೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷೆ ಹೇಮಾವತಿ, ಗ್ರಾಮ ಪಂಚಾಯತ್ ಸದಸ್ಯ ಸುರೇಂದ್ರ ಗೌಡ ಉಪಸ್ಥಿತರಿದ್ದರು. ಬೆಳಾಲಿನ ಸಿಹೆಚ್ಒ ಕು.ತೇಜಾವತಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾಹಿತಿ ನೀಡಿದರು.

ಆಯುಷ್ಮನ್ ವಿಭಾಗದಲ್ಲಿರುವ ಜ್ಯೋತಿ, ಆಯುಷ್ಮನ್ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಪೋಷಕರು ಹಾಗೂ ಊರವರು ವಿವಿಧ ಬಗೆಯ ಪೌಷ್ಟಿಕ ಆಹಾರಗಳನ್ನು ತಯಾರಿಸಿ ತಂದಿದ್ದರು.
ಸಮಿತಿಯ ಮಾಜಿ ಅಧ್ಯಕ್ಷೆ ಭವಾನಿ, ಊರಿನ ಗಣ್ಯರಾದ ಉಷಾದೇವಿ, ಭಾರತಿ ಎಂ., ಹಾಗೂ ಮಕ್ಕಳ ಪೋಷಕರಿಂದ, ಅಂಗನವಾಡಿ ಕಾರ್ಯಕರ್ತೆ ಭಾರತಿ ಹಾಗೂ ಸಹಾಯಕಿ ವಿಮಲ ಇವರಿಗೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹೂಗುಚ್ಛವನ್ನು ನೀಡಿ ಗೌರವಿಸಲಾಯಿತು.

ಅದೇ ದಿನ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಕ್ಕಳಿಗೆ ರಾಧೆ, ಕೃಷ್ಣ ವೇಷವನ್ನು ಧರಿಸಿ ನೃತ್ಯವನ್ನು ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಕೀರ್ತನ್ ಗೌಡ ಅಣಿಯೂರು ಇವರು ಪ್ರೋತ್ಸಾಹ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು. ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಭಾರತಿ ನಿರೂಪಿಸಿ, ಆಶಾ ಕಾರ್ಯಕರ್ತೆ ಶೀಲಾವತಿ ಸ್ವಾಗತಿಸಿ, ಅಶ್ವಿನಿ ಅದವೂರು ವಂದಿಸಿದರು.

p>

LEAVE A REPLY

Please enter your comment!
Please enter your name here