


ಪದ್ಮುಂಜ: ಕಣಿಯೂರು ಗ್ರಾಮ ಪಂಚಾಯತ್ ನಲ್ಲಿ 2023-24ನೇ ಸಾಲಿನ ವಾರ್ಷಿಕ ಜಮಾಬಂದಿ ಕಾರ್ಯಕ್ರಮ ನೋಡಲ್ ಅಧಿಕಾರಿ ಜೋಸೆಫ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಅವಧಿಯಲ್ಲಿ ನಡೆದ ಕಾಮಗಾರಿಗಳ ವೀಕ್ಷಣೆ ನಡೆಸಲಾಯಿತು.ನೋಡಲ್ ಅಧಿಕಾರಿ ಜೋಸೆಫ್ ರವರು ಗ್ರಾಮಸ್ಥರ ಸಮ್ಮುಖದಲ್ಲಿ ಕಾಮಗಾರಿಗಳ ಕಡತ ಪರಿಶೀಲನೆ ನಡೆಸಿದರು.



ಪಂಚಾಯತ್ ಉಪಾಧ್ಯಕ್ಷೆ ಜಾನಕಿ, ಸದಸ್ಯರಾದ ಸುಮತಿ ಬೇಂಗಾಯಿ, ಗಾಯತ್ರಿ, ಉಮಾವತಿ, ಸೀತಾರಾಮ ಮಡಿವಾಳ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಮೇಶ್ ಕೆ ಯವರು ಜಮೆ ಖರ್ಚು ಹಾಗೂ 2023-24ನೇ ಸಾಲಿನ ಕಾಮಗಾರಿಗಳನ್ನು ಓದಿ ಹೇಳಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿತಾ ಆರ್ ಸಾಲಿಯಾನ್ ರವರು ಸ್ವಾಗತಿಸಿದರು.ಕಾರ್ಯದರ್ಶಿ ರಮೇಶ್ ಕೆ ಯವರು ಧನ್ಯವಾದ ಸಲ್ಲಿಸಿದರು.









