

ಉಜಿರೆ: ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯಾ ಕರಾಟೆ ಮಂಗಳೂರು ಡೋಜೋ ಅವರು ಸೆಪ್ಟೆಂಬರ್ 6ರಂದು ಮಂಗಳೂರು ಕುಲಶೇಖರ ಕಾರ್ಡೇಲ್ ಚರ್ಚ್ ಗ್ರೌಂಡ್ ನಲ್ಲಿ ನಡೆಸಿದ ಶೌರ್ಯ ಇಂಟರ್ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ -2024ರಲ್ಲಿ ಉಜಿರೆ ಅನುಗ್ರಹ ಆಂಗ್ಲ ಮಾದ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ರಯ್ಯಾನ್ ಅವರು ಪ್ರಥಮ ಸ್ಥಾನ ಪಡೆದು 2 ಚಿನ್ನದ ಪದಕ ಪಡೆದಿದ್ದಾರೆ.
ಕರಾಟೆ ಫೈಟಿಂಗ್ ಮತ್ತು ಕಟಾದ 45 ಕೆಜಿ ವಿಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 2 ಚಿನ್ನದ ಪದಕ ಸಹಿತ ಪ್ರಥಮ ಸ್ಥಾನ ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ.
ಅವರಿಗೆ ಶಿಹಾನ್ ಅಬ್ದುಲ್ ರಹಮಾನ್ ಅವರು ತರಬೇತಿ ನೀಡಿದ್ದರು. ಅವರು ಉಜಿರೆ ಗಾಂಧಿನಗರ ನಿವಾಸಿ ಬಿ.ಯಚ್.ಇಬ್ರಾಹಿಂ ಮತ್ತು ನೂರ್ ಜಹಾನ್ ದಂಪತಿ ಪುತ್ರ.ಸಮಾರಂಭದಲ್ಲಿ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಸಿ ಸಿ ಬಿ ಮಂಗಳೂರು ಮನೋಜ್ ಕುಮಾರ್ ನಾಯ್ಕ್, ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆಯ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ ಕಟೀಲ್ ಮತ್ತು ಗಣ್ಯ ಅತಿಥಿಗಳು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.