



ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ಗ್ರಾಮದ ಮುಳಿಕ್ಕರ್ ಎಂಬಲ್ಲಿ ವಾಸವಿರುವ ರಾಜೇಂದ್ರರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿವಾಜಿ ಸಂಘದ ಸದಸ್ಯರಾಗಿದ್ದು ವಿಪರೀತ ಗಾಳಿ ಮಳೆಯಿಂದ ಇವರ ಕೃಷಿಗೆ ಹಾನಿಯಾಗಿದ್ದು, ಪ್ರಾಕೃತಿಕ ವಿಕೋಪ ದಡಿಯಲ್ಲಿ ಧರ್ಮಸ್ಥಳದಿಂದ ಮಂಜೂರು ಮಾಡಿರುವ ರೂ.10,000 ಸಹಾಯ ಧನದ ಮಂಜೂರಾತಿ ಪತ್ರವನ್ನು ಧರ್ಮಸ್ಥಳ ಒಕ್ಕೂಟದ ಅಧ್ಯಕ್ಷೆ ಸುನಿತಾ ರವರು ವಿತರಿಸಿದರು.


ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಯಮುನಾ,ಸಕೀನಾ, ಅಣ್ಣಮ್ಮ, ದೇವಕಿ, ಮಾಲತಿ ಹಾಗು ಧರ್ಮಸ್ಥಳ ವಲಯ ಮೇಲ್ವಿಚಾರಕ ರವೀಂದ್ರ ಬಿ ಮತ್ತು ಸೇವಾಪ್ರತಿನಿಧಿ ಸುಜಾತರವರು ಉಪಸ್ಥಿತರಿದ್ದರು.









