ಬೆಳ್ತಂಗಡಿ: ಲಾಯಿಲ ಬಲಮುರಿ ಕ್ಷೇತ್ರದ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಲಾಯಿಲ ವಿಘ್ನೇಶ್ವರ ಕಲಾ ಮಂದಿರದಲ್ಲಿ ಸೆ.7ರಿಂದ 9ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.7ರಂದು ಉತ್ಸವದ ಉದ್ಘಾಟನೆಯನ್ನು ಮಾಜಿ ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಇವರು ನೆರವೇರಿಸಿದರು. ಅಭ್ಯಾಗತರಾಗಿ ಬೆಳ್ತಂಗಡಿ ಉದ್ಯಮಿಗಳಾದ ರಾಜೇಶ್ ಪ್ರಭು, ಅಜಿತ್ ಕುಮಾರ್ ಇಂದಬೆಟ್ಟು ಉಪಸ್ಥಿತರಿದ್ದರು.ಸಂಜೆ ಗಂಟೆ 5ರಿಂದ ಮಂಗಳೂರಿನ ಶ್ರೀ ಶಾರದಾ ಅಂಧರ ಗೀತಗಾಯನ ಕಲಾಸಂಘದಿಂದ ಜನಪದ ಗೀತೆ ಹಾಗೂ ಭಕ್ತಿ ರಸಮಂಜರಿ ನಡೆಯಲಿದೆ.
ಕಾರ್ಯಕ್ರಮವನ್ನು ರುಕ್ಮಯ್ಯ ಕನ್ನಜೆ ನಿರೂಪಿಸಿ, ಕಾರ್ಯದರ್ಶಿ ಅರವಿಂದ್ ಕುಮಾರ್ ಸ್ವಾಗತಿಸಿ, ಗಣೇಶ್ ಧನ್ಯವಾದಗೈದರು.
8ರಂದು ಸಂಜೆ 6ರಿಂದ ಲಾಯಿಲದ ಸಾಧನಾ ಕಲಾತಂಡದಿಂದ ಶ್ರೀಕೃಷ್ಣ ಪಾರಿಜಾತ- ನರಕಾಸುರ ಮೋಕ್ಷ ಯಕ್ಷಗಾನ. ರಾತ್ರಿ 8ರಿಂದ ಕರ್ನೋಡಿ ಮತ್ತು ಪಡ್ಲಾಡಿ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ, ಬಳಿಕ ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ. ರಾತ್ರಿ 9ರಿಂದ ಲಾಯಿಲ ಓಂ ಶಕ್ತಿ ಗೆಳೆಯರ ಬಳಗದ ಕಲಾವಿದರಿಂದ ತುಳು ಸಾಮಾಜಿಕ ಹಾಸ್ಯಮಯ ನಾಟಕ ಬೈರಾಸ್ ಭಾಸ್ಕರೆ. 9ರಂದು ಮಧ್ಯಾಹ್ನ 11.30ರಿಂದ ಕರ್ನೊಡಿ, ಪಡ್ಲಾಡಿ, ಪುತ್ರಬೈಲು, ಹಂದೆವೂರು ಕೊಪ್ಪದಬೈಲು ಹಾಗೂ ಕನ್ನಾಜೆ ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ.