


ಶಿಬಾಜೆ: ಮೊಂಟೆತಡ್ಕ ಶ್ರೀ ದುರ್ಗಾ ಪರಮೇಶ್ವರಿ ದೇವಳದಲ್ಲಿ ತೆನೆ ಪೂಜೆಯನ್ನು ಪ್ರತಿ ವರ್ಷ ಗಣೇಶ ಚತುರ್ಥಿ ದಿನ ಆಚರಿಸಲಾಗುತ್ತಿದ್ದೂ ಈ ವರ್ಷವೂ ಆಚರಣೆ ವಿಜೃಂಭಣೆಯಿಂದ ನಡೆದು ದೇವಳದ ಸುತ್ತ ತೆನೆ ಕಟ್ಟಿ ಬಂದಿರುವ ಭಕ್ತದಿಗಳು ಮನೆ ತುಂಬಿಸಲು ಪೂಜಿಸಲ್ಪಟ್ಟ ತೆನೆಯನ್ನು ತೆಗೆದುಕೊಂಡು ತನ್ನ ಮನೆಯಲ್ಲೂ ಕಟ್ಟುವುದು ಸಂಪ್ರದಾಯ.
ದೇವಾಲಯದಲ್ಲಿ ಚೌತಿ ಪ್ರಯುಕ್ತ ಗಣಪತಿ ಪ್ರತಿಷ್ಟಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಮದ್ಯಾಹ್ನ ಭೋಜನದ ನಂತರ ಕಟ್ಟೆ ಪೂಜೆಗಳ ಮೂಲಕ ಶೋಭಯಾತ್ರೆ ತೆರಳಿ ಕಪಿಲಾ ನದಿಯ ದೇವಿಗುಂಡಿ ಬಳಿ ವಿಸರ್ಜಿಸಲಾಗುತ್ತದೆ.