ನಾರಾವಿ: ಸರಕಾರಿ ಪ್ರೌಢ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಮತ್ತು ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

0

ನಾರಾವಿ: ನಾರಾವಿ ಸರಕಾರಿ ಪ್ರೌಢಶಾಲೆಯಲ್ಲಿ ಮೀರಾ ಕಾಮತ್ ಕಾರ್ಕಳ ಕಂಪ್ಯೂಟರ್ ಲ್ಯಾಬ್ ಮತ್ತು ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ 100% ಫಲಿತಾಂಶ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಣಾತ್ಮಕ ಅಂಕದ ಸರಾಸರಿಯಲ್ಲಿ ಈ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡ ಕೀರ್ತಿಗೆ ಪಾತ್ರರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸೆ.4ರಂದು ಜರಗಿತು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಸುಶೀಲಾ ಇವರು ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕಂಪ್ಯೂಟರ್ ಹಾಗೂ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿಸಿಕೊಟ್ಟ ಕೆ.ಕಮಲಾಕ್ಷ ಕಾಮತ್ ಕಾರ್ಕಳ, ಪ್ರತೀಕ್ ಕಾಮತ್ ಯುಎಸ್ಎ, ಸಂತೋಷ್ ರಾವ್ ಕಾರ್ಕಳ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ಕುಕ್ಕುಂದೂರು ಇದರ ಅಧ್ಯಕ್ಷರು ಉದಯ್ ಹೆಗ್ಡೆ ನಾರಾವಿ ಗ್ರಾಮ ಪಂಚಾಯತ್ ಸದಸ್ಯರು, ಉಮೇಶ್ ಜನಸೇವಾ ಟ್ರಸ್ಟ್ ನ ಕಾರ್ಯದರ್ಶಿಗಳು, ಸುರೇಶ್ ಪೂಜಾರಿ ಎಸ್ ಡಿ ಎಂ ಸಿ ಉಪಾದ್ಯಕ್ಷರು ವೇದಿಕೆಯನ್ನು ಅಲಂಕರಿಸಿದ್ದರು.

2023-24 ನೆ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಮೂರು ವಿದ್ಯಾರ್ಥಿಗಳನ್ನು ಜನಸೇವಾ ಟ್ರಸ್ಟ್ ನ ವತಿಯಿಂದ ಹಾಗೂ ಕಮಲಾಕ್ಷ ಕಾಮತ್ ಪರವಾಗಿ ಸನ್ಮಾನಿಸಿ ಗೌರವಧನ ನೀಡಲಾಯಿತು.100% ಫಲಿತಾಂಶಕ್ಕೆ ಕಾರಣೀಕರ್ತರಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಠಿಣ ಪರಿಶ್ರಮದಿಂದ ವಿದ್ಯಾದಾನ ಮಾಡಿದ ಶಿಕ್ಷಕರನ್ನೂ ಗೌರವದಿಂದ ಸನ್ಮಾನಿಸಲಾಯಿತು.ಕಮಲಾಕ್ಷ ಕಾಮತ್ ಇವರನ್ನೂ ಶಾಲೆಗೆ ನೀಡಿದ ಕೊಡುಗೆಯ ಸಹಕಾರಕ್ಕೆ ಶಾಲಾ ವತಿಯಿಂದ ಹಾಗೂ ಜನಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

ಇಂದಿನ ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಕೋದಂಡರಾಮ ಇವರು ಸ್ವಾಗತಿಸಿ ಹಿಂದಿ ಶಿಕ್ಷಕಿ ಶಾಂಭವಿ ಕುಮಾರಿ ಧನ್ಯವಾದವನ್ನು ನೀಡಿದರು.ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಆಶಾಲತಾ ಗಣಿತ ಶಿಕ್ಷಕಿ ಹಾಗೂ ಗೀತಾ ಕನ್ನಡಭಾಷಾ ಶಿಕ್ಷಕಿ ನೆರವೇರಿಸಿಕೊಟ್ಟರು.

ಕಮಲಾಕ್ಷ ಕಾಮತ್ ರವರ ಸನ್ಮಾನ ಕಾರ್ಯಕ್ರಮವನ್ನು ಆನಂದ್ ಭಟ್ ಸಮಾಜ ವಿಜ್ಞಾನ ಶಿಕ್ಷಕರು ನೆರವೇರಿಸಿದರು.ಸ್ಮಾರ್ಟ್ ಕ್ಲಾಸ್ ಬಗ್ಗೆ ಮಾಹಿತಿಯನ್ನು ವಿಜ್ಞಾನ ಶಿಕ್ಷಕ ಶರೀಫ್ ಕೆ ಸಯ್ಯದ್ ಇವರು ತಿಳಿಸಿದರು.ಆಶಾಲತಾ ಇಂಗ್ಲಿಷ್ ಭಾಷಾ ಶಿಕ್ಷಕಿ ಕಾರ್ಯಕ್ರಮವನ್ನು ನಿರೂಪಿಸಿದರು.

p>

LEAVE A REPLY

Please enter your comment!
Please enter your name here