ಉಜಿರೆ: ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ

0

ಉಜಿರೆ: ಉಜಿರೆ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು

ಸೆ.4ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಸಂಘದ ಅಧ್ಯಕ್ಷರಾದ ಪುಷ್ಪಾವತಿ ಆರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು.

ಸಂಘದಲ್ಲಿ ಒಟ್ಟು 2377 ಸದಸ್ಯರನ್ನು ಹೊಂದಿದ್ದು, 5,47,605 ಪಾಲು ಬಂಡವಾಳದೊಂದಿಗೆ 85 ಲಕ್ಷ ವ್ಯವಹಾರ ಮಾಡಲಾಗಿದೆ ಎಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.

ಉಪಾಧ್ಯಕ್ಷೆ ನಂದಿನಿ ಸಿ.ಶೆಟ್ಟಿ, ನಿರ್ದೇಶಕರಾದ ಧನಲಕ್ಷ್ಮೀ, ಗುಲಾಬಿ, ಜಯಲಕ್ಷ್ಮೀ, ಮಂಜುಳ, ಮೋಹಿನಿ ಪಿ.ವಿ., ನಳಿನಿ, ಪ್ರಮೀಳಾ, ಪುಷ್ಪಲತಾ, ಶಶಿಕಲಾ ಡಿ.ಗೌಡ, ವಿಮಲ, ಯಶೋದ ಬಿ. ಉಪಸ್ಥಿತರಿದ್ದರು.

ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವನಿತಾ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ ಸ್ವಾಗತಿಸಿ, ನಿರ್ದೇಶಕಿ ನಳಿನಿ ವಂದಿಸಿದರು.

p>

LEAVE A REPLY

Please enter your comment!
Please enter your name here