ಬೆಳ್ತಂಗಡಿ: ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಹಾಗೂ ಪ್ರಥಮ ವರ್ಷದ ಬಿಎ, ಬಿಕಾಂ ತರಗತಿಗಳಿಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವು ನೆರವೇರಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಪ್ರೀತಿತ ಧರ್ಮವಿಜೇತ್ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟಕರಾಗಿ ಕೊಕ್ರಾಡಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ದಯಾನಂದ್ ಅಮೀನ್ ದೀಪ ಪ್ರಜ್ವಲಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ಭವ್ಯ ಭವಿಷ್ಯದ ಕುರಿತಾಗಿ ಪ್ರೇರಣಾ ಮಾತುಗಳನ್ನಾಡಿದರು.ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಇವರು ವಿದ್ಯಾರ್ಥಿಗಳ ಕುರಿತಾಗಿ ಹಿತನುಡಿಗಳನ್ನಾಡಿದರು.ಇದೇ ಸಂದರ್ಭದಲ್ಲಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿಗೆ ನೂತನವಾಗಿ ಸೇರ್ಪಡೆಗೊಂಡಂತಹ ಉಪನ್ಯಾಸಕರುಗಳನ್ನು ಅಧ್ಯಕ್ಷೆ ಪ್ರೀತಿತ ಧರ್ಮವಿಜೇತ್ ಹೂನೀಡಿ ಸ್ವಾಗತಿಸಿಕೊಂಡರು.ಪ್ರಥಮ ವರ್ಷಕ್ಕೆ ಸೇರ್ಪಡೆಗೊಂಡಂತಹ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಕೂಡ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ವಿದ್ಯಾರ್ಥಿ ಸಂಘದ ನಾಯಕಿಯಾಗಿ ದೀಕ್ಷಾ ತೃತೀಯ ಬಿಎ, ಉಪನಾಯಕನಾಗಿ ದೀಕ್ಷಿತ್ ದ್ವಿತೀಯ ಬಿ.ಎ ಕಾರ್ಯದರ್ಶಿಯಾಗಿ ಆಶೀರ್ವಾದ ತೃತಿಯ ಬಿಕಾಂ, ಜೊತೆ ಕಾಯದರ್ಶಿಯಾಗಿ ಸುಹಾನ ಬಾನು ದ್ವಿತೀಯ ಬಿಎ, ಕ್ರೀಡಾ ಸಂಘದ ಕಾರ್ಯದರ್ಶಿಯಾಗಿ ಮನೋಹರ್ ತೃತೀಯ ಬಿಕಾಂ, ಕ್ರೀಡೆ ಸಂಘದ ಜೊತೆ ಕಾರ್ಯದರ್ಶಿಯಾಗಿ ಲಕ್ಷ್ಮಿಶ್ರೀ ತೃತೀಯ ಬಿಎ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಜ್ಯೋತಿ ತೃತೀಯ ಬಿಕಾಂ, ಮತ್ತು ಜೊತೆ ಕಾರ್ಯದರ್ಶಿಯಾಗಿ ಪ್ರೀತಮ್ ಲೋಬೊ ತೃತೀಯ ಬಿಎ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ನಾಯಕನಾಗಿ ಮಿಥುನ್ ದ್ವಿತೀಯ ಬಿಎ, ನಾಯಕಿಯಾಗಿ ಚಂದನ ದ್ವಿತೀಯ ಬಿಎ, ಲಲಿತ ಕಲಾಸಂಘದ ನಾಯಕಿಯಾಗಿ ಮೋಕ್ಷ ಶೆಟ್ಟಿ ತೃತಿಯ ಬಿಎ, ಕೀರ್ತನ್ ತೃತೀಯ ಬಿಕಾಂ ಇವರಿಗೆ ಪ್ರಾಂಶುಪಾಲೆ ಡಾ.ಸವಿತಾ ಪ್ರಮಾಣವಚನವನ್ನು ಭೋಧಿಸಿದರು.
ರಾಜ್ಯಶಾಸ್ತ್ರ ಉಪನ್ಯಾಸಕಿ ಕುಮಾರಿ ಅಕ್ಷತಾ ಉದ್ಘಾಟಕರ ಪರಿಚಯವನ್ನು ವಾಚಿಸಿದರು. ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಬಿಎ ಶಮಿವುಲ್ಲಾ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಸತೀಶ್ ಸಾಲ್ಯಾನ್ ವಂದಿಸಿದರು.ನಿರೂಪಣೆಯಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕ ಶಿವರಾಜ್ ಗಟ್ಟಿ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕಿ ಬಬಿತಾ ರೈ ಸಹಕರಿಸಿದರು. ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅನೇಕ ಸ್ಪರ್ಧೆಯೊಂದಿಗೆ ಈ ಕಾರ್ಯಕ್ರಮ ಕೊನೆಗೊಂಡಿತು. ಈ ಸಂದರ್ಭ ಕಾಲೇಜಿನ ಉಪನ್ಯಾಸಕ ವೃಂದ, ಕಚೇರಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.