ಬೆಳ್ತಂಗಡಿ: ಎನ್ಆರ್ಎಲ್ಎಂ ಯೋಜನೆಯ ಪಶು ಸಖಿಯವರಿಗೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಭಾಗಿತ್ವದಲ್ಲಿ “21ನೇ ಜಾನುವಾರು ಗಣತಿ-2024” ಕುರಿತು ತರಬೇತಿ ಕಾರ್ಯಕ್ರಮ ಆ.31ರಂದು ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ತಾ.ಪಂ.ಇಒ ಭವಾನಿಶಂಕರ್ ಕಾರ್ಯಕ್ರಮ ಉದ್ಘಾಟಿಸಿ, ಸಖಿಯರು ಗ್ರಾಮೀಣ ಭಾಗದ ರೈತಜನರಿಗೆ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ನೆರವಾಗಬೇಕು ಹಾಗೂ ರೈತ ಮಹಿಳೆಯರು ಆರ್ಥಿಕವಾಗಿ ಸಬಲರನ್ನಾಗಿಸಬೇಕು ಎಂದು ನುಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದದ್ದ ವೈದ್ಯಾಧಿಕಾರಿ ವಿನಯ್ ಕುಮಾರ್ ಮಾಹಿತಿ ನೀಡಿದರು. ಮುಖ್ಯ ಪಶುವೈದ್ಯಾಧಿಕಾರಿ ವೈದ್ಯಾಧಿಕಾರಿ(ಆಡಳಿತ) ರವಿ ಕುಮಾ, ಪಶು ಸಂಗೋಪನ ಇಲಾಖೆಯ ವೈದ್ಯಾಧಿಕಾರಿ, ಅಧಿಕಾರಿಗಳು, ಎನ್ ಆರ್ ಎಲ್ ಎಂ ತಾಲೂಕು ಅಭಿಯಾನ ಘಟಕದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
p>