

ವೇಣೂರು: ಸ.ಉ.ಪ್ರಾ.ಶಾಲೆ ಬರಂಗಾಯದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಉಂಬೆಟ್ಟು ಸ.ಉ.ಪ್ರಾ. ಶಾಲೆಯ ಬಾಲಕಿಯರು ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬೆಸ್ಟ್ ಆಲ್ ರೌಂಡರ್ ಆಗಿ ಕುಮಾರಿ ಪ್ರತೀಕ್ಷಾ, ಬೆಸ್ಟ್ ಕ್ಯಾಚರ್ ಆಗಿ ಕುಮಾರಿ ಪ್ರತೀಕ್ಷಾ ಎನ್. ಹೊರಹೊಮ್ಮಿದ್ದು ತಂಡದ ವಿದ್ಯಾರ್ಥಿನಿಯರು ಉತ್ತಮ ಪ್ರದರ್ಶನ ನೀಡಿದರು.