ಬೆಳ್ತಂಗಡಿ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ವಾಸ್ತವ್ಯದ ಮನೆಗಳ ಹಾಗೂ ಸಭಾಭವನದ ಉದ್ಘಾಟನೆ ಮತ್ತು ಸಂಘದ ಸದಸ್ಯರ ಮಕ್ಕಳಿಗೆ ಡಿ.ಎನ್.ಎಸ್.ಗೋಖಲೆ ಸ್ಮರಣಾರ್ಥ ವಿದ್ಯಾನಿಧಿ ವಿತರಣೆ ಸಂಘದ ಕೇಂದ್ರ ಕಚೇರಿ ಆವರಣದಲ್ಲಿ ಆ.18ರಂದು ನಡೆಯಿತು.
ಸಂಘದ ನೂತನ ವಾಸ್ತವ್ಯದ ಮನೆಗಳನ್ನು ಅಡೂರು ವೆಂಕಟ್ರಯ ಉದ್ಘಾಟಿಸಿ ಮಾತನಾಡಿದ ಇವರು ಒಳ್ಳೆಯ ಅಭಿವೃದ್ಧಿಯನ್ನು ಮಾಡಬೇಕು ಎಂಬ ಉದ್ದೇಶವನ್ನು ಈ ಸಂಸ್ಥೆ ಹುಟ್ಟಿಕೊಂಡಿದೆ ಬ್ಯಾಂಕಿನ ಎಲ್ಲಾ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸಿಬ್ಬಂದಿಗಳ ಒಳ್ಳೆಯ ಸಹಕಾರದಿಂದ ವಸ್ತುನಿಷ್ಠೆಯಿಂದ ಶ್ರಮಪಟ್ಟ ಕಾರಣ ಶತಮಾನೋತ್ಸವ ಆಚರಣೆಗೆ ಕಾರಣವಾಯಿತು ಮುಂದಿನ ಜನಾಂಗವು ಈ ರೀತಿಯಾಗಿ ಬೆಳೆಸಿಕೊಂಡು ಹೋಗಬೇಕು, ಸಂಸ್ಥೆಯನ್ನು ಒಳ್ಳೆಯದಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರಿಗೂ ಇದೇ ಎಂದರು.
ಆಂತರಿಕ ಲೆಕ್ಕಪರಿಶೋಧಕ ನಾರಾಯಣ ಫಡ್ಕೆ, ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ ನೂಜಿ ಅಧ್ಯಕ್ಷತೆ ವಹಿಸಿದ್ದರು.
ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ, ಕಲ್ಮಂಜ ಗ್ರಾಪಂ ಅಧ್ಯಕ್ಷೆ ವಿಮಲಾ, ಚಾರ್ಮಾಡಿ ಗ್ರಾಪಂ ಅಧ್ಯಕ್ಷೆ ಶಾರದಾ ಎ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಪ್ರಭು ಎಂ., ನಿರ್ದೇಶಕರಾದ ಜ್ಯೋತಿ ಜೆ. ಫಡ್ಕೆ, ಸುಮಾ ಎಂ.ಗೋಖಲೆ, ಶಶಿಧರ ಎಂ.ಕಲ್ಮಂಜ, ರಾಘವ ಕಲ್ಮಂಜ, ಶಶಿಧರ., ನಯನಾ, ಗಜಾನನ ವಝೆ, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪಾಧ್ಯಕ್ಷ ಪ್ರಕಾಶನಾರಾಯಣ ಕೆ. ಸ್ವಾಗತಿಸಿ ನಿರ್ದೇಶಕ ಕೊರಗಪ್ಪ ನಾಯ್ಕ ಹಾಗೂ ಸಿಬ್ಬಂದಿ ಸೂಷ್ಮ ನಿರೂಪಿಸಿ, ನಿರ್ದೇಶಕ ಸಂಜೀವ ಗೌಡ ಎಂ ವಂದಿಸಿದರು.