ಲಾಯಿಲ: ಪಡ್ಲಾಡಿಯ 1ನೇ ವಾರ್ಡ್ ಬಡವನೆಯಲ್ಲಿ ಪಂಚಾಯತ್ ಸದಸ್ಯರ ಹೆಸರಿನಲ್ಲಿ ಸೈಟ್ ಮಾಡಿಕೊಂಡಿದ್ದರೆ. ಮೂಲ ವಾರಸುದಾರರು ಎಷ್ಟು ಜನ ಮನೆ ಕಟ್ಟಿದ್ದಾರೆ ಎಂದು ಶೇಖರ್ ಲಾಯಿಲ ಪ್ರಶ್ನೆ. ಮೂಲ ವಾರಸುದಾರರು ಇಲ್ಲದಿದ್ದರೆ ಪೊಲೀಸ್ ಅನುಮತಿ ಪಡೆದು ತೆರವು ಮಾಡಬೇಕು ಮತ್ತು ತಾಲೂಕಿನಲ್ಲಿ ತಾಲೂಕು ಪಂಚಾಯತ್ ಗ್ರಾಮ ಪಂಚಾಯತ್ ನಿದ್ರಾ ವ್ಯವಸ್ಥೆಯಲ್ಲಿದೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಬರಬೇಕೆಂದು ಇಲ್ಲವಾದರೆ ಗ್ರಾಮ ಸಭೆಯನ್ನು ನಡೆಸಲು ಬಿಡುವುದಿಲ್ಲ ಎಂದು ಪ್ರತಿಭಟಿಸಿದರು.
ಇದಕ್ಕೆ ಸರಿಯಾದ ಉತ್ತರ ಕೋಡಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು ತಾಲೂಕು ಮಟ್ಟದ ಅಧಿಕಾರಿಗಳು ಬಂದು ಉತ್ತರ ನೀಡಬೇಕು ಇಲ್ಲದಿದ್ದರೆ ನಾನು ಇಲ್ಲಿಯೇ ನಿದ್ರೆ ಮಾಡುತ್ತೇನೆ,ಅವರು ಬರುವವರೆಗೆ ನಾನು ಎದ್ದೆ ಏಳುವುದಿಲ್ಲ ಎಂದು ಶೇಖರ್ ಲಾಯಿಲ ಹೇಳಿದರು.ಇದಕ್ಕೆ ಉತ್ತರಿಸಿದ ಸದಸ್ಯ ಅರವಿಂದ್ 2011-12ರ ಸಾಲಿನಲ್ಲಿ ಸೈಟ್ ಮಂಜೂರು ಆಗಿದೆ ನಮಗೆ ರಾಜಿನಾಮೆ ಕೊಡಲು ಹೇಳುವುದು ಸರಿಯಲ್ಲ ನೀವು ಅವರಲ್ಲಿ ಕೇಳಿ ನಮ್ಮ ಅವಧಿಯ ಸದಸ್ಯರು ಎಲ್ಲ ಸೈಟ್ ಗಳನ್ನು ರದ್ದು ಮಾಸಲು ತಿಳಿಸಿದ್ದೇವೆ ಎಂದು ಹೇಳಿದರು.
ಲಾಯಿಲ ಗ್ರಾಮ ಪಂಚಾಯತ್ ಪ್ರಥಮ ಸುತ್ತಿನ ಗ್ರಾಮ ಸಭೆ ಲಾಯಿಲ ಗ್ರಾಮ ಪಂಚಾಯತ್ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷೆ ಜಯಂತಿ ಎಂ.ಕೆ ರವರ ಅಧ್ಯಕ್ಷತೆಯಲ್ಲಿ ಆ.17ರಂದು ಲಾಯಿಲ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಮಾರ್ಗದರ್ಶಕ ಅಧಿಕಾರಿಯಾಗಿ ಬೆಳ್ತಂಗಡಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೀಯಾ ಮುನ್ನಡೆಸಿದರು.
ಗ್ರಾ.ಪಂ. ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್ ಗ್ರಾ.ಪಂ. ಸದಸ್ಯಸರಾದ ಬೆನೆಡಿಕ್ಟಾ ಸಲ್ಡಾನಾ, ಗಣೇಶ್, ಅರವಿಂದ್ ಕುಮಾರ್, ಆಶಾಲತಾ, ಚಿದಾನಂದ ಶೆಟ್ಟಿ, ದಿನೇಶ್ ಶೆಟ್ಟಿ, ಹರಿಕೃಷ್ಣ, ಹರೀಶ್ ಕುಲಾಲ್, ಜಯಂತಿ, ಜಯಂತಿ ಎಂ.ಕೆ, ಮಹೇಶ್.ಕೆ, ಪ್ರಸಾದ್ ಶೆಟ್ಟಿ, ರಜನಿ ಎಂ.ಆರ್, ರೇವತಿ, ಸವಿತಾ, ಮರಿಯಮ್ಮ ಆಶಾಕಾರ್ಯಕರ್ತೆಯರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮಸ್ಥರ ಒತ್ತಾಯದಂದ ಸಭೆ ತಾಲೂಕು ಪಂಚಾಯತ್ ವ್ಯವಸ್ಥಾಪಕ ಪ್ರಶಾಂತ್ ಬಳಂಜ ಭೇಟಿ ನೀಡಿ ಉತ್ತರಿಸಿದ ಬಳಿಕ ಗ್ರಾಮ ಸಭೆಯನ್ನು ಮುನ್ನಡೆಸಿದರು.ಜಮಾ – ಖರ್ಚು ಮತ್ತು , ವಾರ್ಡ್ ಸಭೆಯ ಪ್ರಸ್ತಾವನೆಯನ್ನು ಓದಿದರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ತಾರಾನಾಥ್ ಸ್ವಾಗತಿಸಿ, ಖರ್ಚು ಹಾಗೂ ವಾರ್ಡ್ ಸಭೆಯಲ್ಲಿ ಬಂದ ಪ್ರಸ್ತಾವನೆಗಳನ್ನು ಓದಿದರು.