ಕುತ್ಲೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗಿರುವ ಕುರಿಯಾಡಿ ಅಂಗನವಾಡಿ ಕೇಂದ್ರದಲ್ಲಿ 78ನೇ ಸ್ವಾತಂತ್ರ್ಯವನ್ನು ಸಂಭ್ರಮದಿಂದ ಗುರುವಾರ ಆಚರಿಸಲಾಯಿತು.ಕುತ್ಲೂರು ಕುರಿಯಾಡಿ ಅಂಗನವಾಡಿ ಸಮಿತಿ, ಮಲೆಕುಡಿಯ ಸಂಘ ಗ್ರಾಮ ಸಮಿತಿ, ಸ್ತ್ರೀಶಕ್ತಿ ಸ್ವಸಹಾಯ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.ಧ್ವಜಾರೋಹಣವನ್ನು ನಾರಾವಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಂತೋಷ್ ಕಾಂತಬೆಟ್ಟು ನೇವೇರಿಸಿದರು.
ಸಂತೋಷ್ ಕಾಂತಬೆಟ್ಟು ಅವರು, ಹಿರಿಯರು ತ್ಯಾಗ, ಬಲಿದಾನದ ಮೂಲಕ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅದನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕು ಎಂದು ಹೇಳಿ ಶುಭಹಾರೈಸಿದರು.ಕುರಿಯಾಡಿ ಅಂಗನವಾಡಿ ಸಮಿತಿಯ ಕಾರ್ಯದರ್ಶಿ ಸುಧಾಕರ ಮಲೆಕುಡಿಯ ಅವರು ಅಂಗನವಾಡಿಯ ವರದಿಯನ್ನು ಮಂಡಿಸಿ, ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಿದರು.ಕುರಿಯಾಡಿ ಅಂಗನವಾಡಿಯನ್ನು ಮೇಲ್ದರ್ಜೆಗೇರಿಸಿ ಸಹಾಯಕಿಯನ್ನು ನೇಮಿಸಲು ಒತ್ತಾಯಿಸಿ ಸಂಬಂಧಿಸಿದ ಇಲಾಖೆಗೆ ಮನವಿ ಮಾಡುವುದು ಎಂದು ತೀರ್ಮಾನಿಸಲಾಯಿತು.
ಅಂಗನವಾಡಿಗೆ ಪೌಷ್ಟಿಕ ಆಹಾರವನ್ನು ಸ್ಥಳೀಯರೇ ಸುಮಾರು ಆರು ಕಿ.ಮೀ ದೂರದಿಂದ ಹೊತ್ತು ತರಲಾಗುತ್ತಿದೆ. ಅಂಗನವಾಡಿ ಸಮೀಪದಲ್ಲೇ ನದಿ ಹರಿಯುತ್ತಿರುವುದರಿಂದ ಪೌಷ್ಟಿಕ ಆಹಾರ ತರಲು ಸಮಸ್ಯೆ ತಲೆದೋರುತ್ತಿದೆ ಹೀಗಾಗಿ ಈ ನದಿಗೆ ಕಾಲುಸಂಕ ನಿರ್ಮಿಸುವಂತೆ ಒತ್ತಾಯಿಸಿ ಸಂಬಂಧಿಸಿದ ಇಲಾಖೆಗೆ ಮನವಿ ಮಾಡುವುದು ಎಂದು ತೀರ್ಮಾನಿಸಲಾಯಿತು.ಧ್ವಜಕಟ್ಟೆ ನಿರ್ಮಿಸಿಕೊಟ್ಟ ಸಂತೋಷ್ ಕಾಂತಬೆಟ್ಟು ಅವರಿಗೆ ಅಂಗನವಾಡಿ ಸಮಿತಿಯಿಂದ ಸ್ಮರಣಿಕೆ ನೀಡಲಾಯಿತು.ಅಂಗನವಾಡಿ ಕಾರ್ಯಕರ್ತೆ ಲೋಕೇಶ್ವರಿ, ಸಮಿತಿ ಅಧ್ಯಕ್ಷ ವಿಶ್ವನಾಥ, ಮಲೆಕುಡಿಯ ಸಂಘದ ಉಪಾಧ್ಯಕ್ಷ ಸುರೇಶ ಮಲೆಕುಡಿಯ ಕೋಟ್ಯಂದಡ್ಕ, ಕಾರ್ಯದರ್ಶಿ ರಂಜಿತ್, ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಶಶಿಕಲಾ, ಹಾಗೂ ಹಿರಿಯರಾದ ಹುಕ್ರ ಮಲೆಕುಡಿಯ, ಚೀಂಕ್ರ ಮಲೆಕುಡಿಯ, ಪೂವಪ್ಪ ಮಲೆಕುಡಿಯ, ಹೊನ್ನಯ ಮಲೆಕುಡಿಯ, ರವಿ ಮಲೆಕುಡಿಯ, ಶೇಖರ ಮಲೆಕುಡಿಯ ಬರೆಂಗಾಡಿ, ನೀಲಯ್ಯ ಮಲೆಕುಡಿಯರು, ಹರೀಶ ಪಂಜಾಲು, ರಾಜು, ಸದಾಶಿವ, ಜಯ ಒಂಜರ್ದಡಿ, ಉದಯ ಬರೆಂಗಾಡಿ, ಶ್ರೀಧರ ಮಲೆಕುಡಿಯ, ವಸಂತ ಪಂಜಾಲು, ರಮೇಶ, ಲೀಲಾ, ವಾರಿಜ, ಸುರೇಖಾ, ಜಯ ಒಂಜರ್ದಡಿ, ಗಿರಿಜಾ, ಹೊನ್ನಮ್ಮ, ದೀಕ್ಷಾ, ಸುರಕ್ಷಾ ಹಾಗೂ ಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.