ಅಂಡಿಂಜೆ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ

0

ಅಂಡಿಂಜೆ: ಗ್ರಾಮ ಪಂಚಾಯತು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇದರ ಆಶ್ರಯದಲ್ಲಿ ಅಂಡಿಂಜೆ ಗ್ರಾಮ ಪಂಚಾಯತು ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಗ್ರಾಮ ಪಂಚಾಯತು ಅಧ್ಯಕ್ಷರಾದ ನಿತಿನ್.ಎಂ ಇವರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಪಂಚಾಯತು ಉಪಾಧ್ಯಕ್ಷೆ ಶ್ವೇತಾ, ಪಂಚಾಯತು ಸದಸ್ಯರುಗಳು, ಪಂಚಾಯತು ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್, ಪಂಚಾಯತು ಕಾರ್ಯದರ್ಶಿ ಚಂ.ಪಾ.ಅಂಡಿಂಜೆ, ಶಾಲಾ ಮುಖ್ಯ ಶಿಕ್ಷಕ ಶಿವಶಂಕರ ಭಟ್ ಅಂಡಿಂಜೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಮೇಶ ಅಂಡಿಂಜೆ, ಶಾಲಾ ಅಧ್ಯಾಪಕರು, ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಪಂಚಾಯತು ಸಿಬ್ಬಂದಿಗಳು, ಅಂಡಿಂಜೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಂಡಿಂಜೆ ಶಾಲಾ ಅಧ್ಯಾಪಕಿ ಕವನ ನಿರೂಪಿಸಿ, ಗ್ರಾಮ ಪಂಚಾಯತು ಸಿಬ್ಬಂದಿ ಶೀನ.ಕೆ ಸ್ವಾಗತಿಸಿ, ಪಂಚಾಯತು ಸದಸ್ಯರಾದ ಪರಮೇಶ ವಂದಿಸಿದರು.

LEAVE A REPLY

Please enter your comment!
Please enter your name here