ಗುರುವಾಯನಕೆರೆ ‘ಸುಪ್ರಿಂ ಇಲೆಕ್ಟ್ರಾನಿಕ್ಸ್’ ನಲ್ಲಿ ಸ್ವಾತಂತ್ರ್ಯ ದಿನಾಚರಣೆ, ಯೋಧರಿಗೆ ನಮನ- ಲಕ್ಕಿ ಡ್ರಾ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

0

ಬೆಳ್ತಂಗಡಿ: ಸುಪ್ರಿಂ ಸೋಫಾ ಮಾರ್ಟ್, ಫರ್ನಿಚರ್ಸ್ ಮತ್ತು ಇಲೆಕ್ಟ್ರಾನಿಕ್ಸ್ ಮಳಿಗೆ ಪಿಂಟೋ ಕಾಂಪ್ಲೆಕ್ಸ್, ಗುರುವಾಯನಕೆರೆ ಮುಖ್ಯ ರಸ್ತೆಯಲ್ಲಿ 78ನೇ ಸ್ವಾತಂತ್ರೋತ್ಸವ ಆಚರಣೆ, ಗ್ರಾಹಕರ ಖರೀದಿಗೆ ನೀಡಲಾಗಿದ್ದ ಅದೃಷ್ಟ ಚೀಟಿ ಲಕ್ಕಿ ಡ್ರಾ ಕಾರ್ಯಕ್ರಮ, ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಆನ್ಲೈನ್ ಭಾಷಣ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಯೋಧರಿಗೆ ಗೌರವ ಕಾರ್ಯಕ್ರಮ ಆ.15 ರಂದು ನಡೆಯಿತು.

ಅಧ್ಯಕ್ಷತೆಯನ್ನು ಸುಪ್ರಿಂ ಸಮೂಹ ಸಂಸ್ಥೆಗಳ ಮಾಲಕ ಎಂ.‌ಅಬ್ದುಲ್ಲ ವಹಿಸಿದ್ದರು.ಧ್ವಜಾರೋಹಣ ನೆರವೇರಿಸಿ ಬಳಿಕ ಗೌರವ ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ಗೌರವ ಸ್ವೀಕರಿಸುವ ಯೋಧ ಫ್ರಾನ್ಸಿಸ್ ಶಾಜಿ ಇವರು ಶುಭ ಹಾರೈಸಿದರು.

ಸಮಾರಂಭದಲ್ಲಿ ತಾ.ಪಂ ಮಾಜಿ ಸದಸ್ಯ ಗೋಪಿನಾಥ ನಾಯಕ್ ಗುರುವಾಯನಕೆರೆ, ಯುವ ಸಿವಿಲ್ ಗುತ್ತಿಗೆದಾರ ಅಶ್ರಫ್ ಸುನ್ನತ್‌ಕೆರೆ, ಗುರುವಾಯನಕೆರೆ ಮಸ್ಜಿದ್ ಆಡಳಿತ ಮಂಡಳಿ ಉಪಾಧ್ಯಕ್ಷ ಉಮರ್ ಜಿ.ಕೆ, ಹಿರಿಯರಾದ ಹನೀಫ್ ಗುರುವಾಯನಕೆರೆ, ಮಾರದಶಲ್ ಆರ್ಟ್ಸ್ ಕರಾಟೆ ಹಾಗೂ ಒಲೆಂಪಿಕ್‌ನ ತೈಕೊಂಡ ತರಬೇತುದಾರ ಹಾರಿಸ್ ಉಪಸ್ಥಿತರಿದ್ದರು.

ಸುಪ್ರಿಂ ಇಲೆಕ್ಟ್ರಾನಿಕ್ಸ್ ಮಾಲಕ ಝುಬೈರ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಮಾಲಿಕರ ಪತ್ಮಿ ಶಮೀನಾ, ಸಹೋದರರಾದ ಜಲೀಲ್, ಯೂನುಸ್, ಜಬ್ಬಾರ್, ಮನ್ಸೂರ್ ಮತ್ತು ರಶೀದ್, ಸಿಬ್ಬಂದಿಗಳಾದ ಇರ್ಶಾದ್, ರಾಫಿಝ್, ಉನೈಸ್, ಅಜ್ಮಲ್, ಹನೀಫ್, ಅಶ್ರಫ್, ಮುದಸ್ಸಿರ್, ಅಚ್ಚುತ ಮೊದಲಾದವರು ಸಹಕರಿಸಿದರು.ಪತ್ರಕರ್ತ ಅಚ್ಚು ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.

ಬಹುಮಾನ ವಿತರಣೆ: ಸುಪ್ರಿಂ ಸಂಸ್ಥೆಯಲ್ಲಿ ಪ್ರತೀ 2000 ರೂ ಖರೀದಿಗೆ ಲಕ್ಕಿ ಕೂಪನ್ ವ್ಯವಸ್ಥೆ ಮಾಡಿದ್ದು ಅದರಲ್ಲಿ ಅದೃಷ್ಟವಂತರಾದ ಅಬ್ದುಸ್ಸಲಾಂ ಕೆ.ಕೆ ಚಾರ್ಮಾಡಿ ಅವರಿಗೆ ಮೊಬೈಲ್ ಪೋನ್ ಬಹುಮಾನ, ಸ್ಥಳದಲ್ಲಿದ್ದ ಗ್ರಾಹಕರಿಗೆ ಬಹುಮಾನ ದಡಿ ಚೀಟಿ ಎತ್ತುವ ಮೂಲಕ ಆಯ್ಕೆಯಾದ ಉಮರ್ ಜಿ.ಕೆ ಮತ್ತು ಈರಯ್ಯ ಸವದತ್ತಿ ಅವರಿಗೆ ಹಾಗೂ ಮಕ್ಕಳ‌ ವಿಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ವಿಷಯದಲ್ಲಿ ವಿಜೇತರಾದ ಗುರುವಾಯನಕೆರೆ ಸರಕಾರಿ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಅನಾಗ್ ಅವರಿಗೆ ಬಹುಮಾನ ವಿತರಿಸಲಾಯಿತು.

p>

LEAVE A REPLY

Please enter your comment!
Please enter your name here