ಬೆದ್ರಬೆಟ್ಟು : ಮರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯೋತ್ಸವದ ಆಚರಣೆ

0

ಬೆದ್ರಬೆಟ್ಟು: ಮರಿಯಾಂಬಿಕಾ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ವಂದನೀಯ. ಫಾ.ಜೋಸೆಫ್ ಮಟ್ಟಂ ನಿರ್ದೇಶಕರು ಜ್ಞಾನ ನಿಲಯ ಬೆಳ್ತಂಗಡಿ ಇವರು ಆಗಮಿಸಿ ಸ್ವಾತಂತ್ರೋತ್ಸವದ ಶುಭ ಹಾರೈಕೆಯನ್ನು ನೀಡಿದರು.

ಧ್ವಜಾರೋಹಣ ಕಾರ್ಯಕ್ರಮವನ್ನು ಇಂದಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾಲತಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಚರ್ಚ್ ಸಮಿತಿಯ ಸದಸ್ಯರುಗಳಾದ ಸಜಿ ಓ. ಎಸ್, ಪ್ರಶಾಂತ್, ಫ್ರಾನ್ಸಿಸ್, ಶಾಲಾ ಸಂಚಾಲಕರಾದ ವಂದನೀಯ ಫಾ.ಸೆಬಾಸ್ಟಿಯನ್ ಮುಖ್ಯ ಶಿಕ್ಷಕಿ ವಂದನೀಯಸಿಸ್ಟರ್ ಶೆರಿನ್, ಪೋಷಕರು, ಹಳೆ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು,ಭೋಧಕ ಮತ್ತು ಭೋಧಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಾಲೆಯ ಶಿಸ್ತಿನ ಪಥಸಂಚಲನದ ಮೂಲಕ ಅತಿಥಿಗಳನ್ನು ಬರಮಾಡಿಕೊಂಡು ರಾಷ್ಟ್ರಧ್ವಜಕ್ಕೆ ಗೌರವವನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿದ್ದ ಶಾಲಾ ಸಂಚಾಲಕರು ಸ್ವಾತಂತ್ರ್ಯೋತ್ಸವದ ಶುಭ ಹಾರೈಕೆಯನ್ನು ಕೋರಿದರು. ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಸೆಬಾಸ್ಟಿಯನ್ ಎಂ ಜೆ ಇವರನ್ನು ತಾವು ಮಾಡಿದ ದೇಶ ಸೇವೆಯನ್ನು ನೆನಪಿಸಿಕೊಂಡು ಶಾಲೆಯ ವತಿಯಿಂದ ಗೌರವಿಸಲಾಯಿತು. 2023- 24ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಮುಖೇಶ್ ಗೌಡ, ಅನ್ವಿತಾ, ಸೃಜನ್ ಇವರನ್ನು ಅಭಿನಂದಿಸಲಾಯಿತು.

ಶಾಲಾ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿ, ಸ್ವಾತಂತ್ರ್ಯ ಹೋರಾಟಗಾರರ ಘೋಷಣೆ ಕೂಗಿ ಹೋರಾಟಗಾರರನ್ನು ಸ್ಮರಿಸಿಕೊಂಡರು. ವೇದಿಕೆಯಲ್ಲಿ ಅನೇಕ ಸಾಂಸ್ಕೃತಿಯ ಕಾರ್ಯಕ್ರಮಗಳು ಮೂಡಿಬಂದವು. ಕಾರ್ಯಕ್ರಮ ನಿರೂಪಣೆಯನ್ನು ಸಹ ಶಿಕ್ಷಕಿ ಮರಿಟಾ ನಿರ್ವಹಿಸಿ ಬಂದವರೆಲ್ಲರಿಗೂ ಕುಮಾರಿ ವತ್ಸಲಾ ಸ್ವಾಗತಿಸಿ ಶ್ರೀಮತಿ ಶ್ವೇತಾ ಧನ್ಯವಾದವಿತ್ತರು.ಅನೇಕ ಪೋಷಕರು ಸಿಹಿತಿಂಡಿಯನ್ನು ನೀಡಿ ಸಹಕರಿಸಿದರು.

LEAVE A REPLY

Please enter your comment!
Please enter your name here