ಉಜಿರೆ: ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ “ಆಟಿಡೊಂಜಿ ದಿನ” ಕಾರ್ಯಕ್ರಮ ಆ.13ರಂದು ಜರಗಿತು. ಸೋನಿಯಾ ವರ್ಮ ನಿನಾದ ಉಜಿರೆ ಸಿಂಗಾರ ಅರಳಿಸಿ ದೀಪ ಬೆಳಗಿಸಿ ಚೆನ್ನಮಣೆ ಆಟವಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಧಾಟಿಸಿದರು. ನಮ್ಮ ಸಂಸ್ಕೃತಿಯ ಬಗ್ಗೆ ಸಂಕೋಚ ಬೇಡ, ಮೊದಲಿನ ಆಚಾರ ವಿಚಾರಗಳನ್ನು ಗೌರವಿಸಿ, ಆಟಿ ತಿಂಗಳ ಮಹತ್ವ ತಯಾರಿಸುವ ಪ್ರತಿಯೊಂದು ತಿಂಡಿ ತಿನಸುಗಳಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ, ಹಿರಿಯರು ಹೇಳಿದ ಮಾತನ್ನು ಪಾಲಿಸುವ ಮೂಲಕ ಅವರಿಗೆ ಗೌರವ ಕೊಡಿ, ಆಹಾರವನ್ನು ಪೋಲು ಮಾಡಬೇಡಿ ಪ್ರಕೃತಿಗೆ ಅನುಗುಣವಾಗಿ ಆಹಾರ ಕ್ರಮ ಬದಲಾಗುತ್ತಾ ಇರಲಿ ಎಂದರು.
ಶ್ರೀ ಧ.ಮ. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್ ಬಳಿಕ ಮಾತಾಡಿ ಹಿಂದಿನ ಕಾಲದ ಹಿರಿಯರು ಮಾಡಿದ ಆಚರಣೆಗೆ ಅರ್ಥ ಇತ್ತು ತುಳುನಾಡಿನ ಜನರು ಪ್ರಕೃತಿಯನ್ನು ಆರಾಧನೆ ಮಾಡುವವರು ಅವರ ಆಹಾರ ಶೈಲಿಯಲ್ಲಿ ಕೂಡ ವಿಶೇಷತೆ ಇದೆ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳ ಮೂಲಕ ಪರಿಚಯಿಸುವುದು ಹೆಚ್ಚು ಸೂಕ್ತ ಎಂದರು.
ರತ್ನಮಾನಸದ ನಿಲಯ ಪಾಲಕ ಯತೀಶ ಬಳಂಜರವರು “ಆಷಾಡ ಮಾಸವನ್ನು ಯಾವ ರೀತಿ ಆಚರಣೆ ಮಾಡುತ್ತಾರೆ ಎಂಬ ವಿಶೇಷತೆಯನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಮುಖ್ಯೋಪಾಧ್ಯಾಯ ಕೆ.ಸುರೇಶ್ ಆಷಾಢದ ಮಹತ್ವ ಬಗ್ಗೆ ತಿಳಿಸಿದರು.ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ, ವಿದ್ಯಾರ್ಥಿಗಳು ಆಷಾಡ ಮಾಸದ ವಿವಿಧ ಖಾಧ್ಯಗಳು ಹಾಗೂ ಹಳೆಯ ಕಾಲದ ವಸ್ತುಗಳ ಪ್ರದರ್ಶನ ಮಾಡಿ ಬಹುಮಾನ ಪಡೆದರು.
ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು, ವಿದ್ಯಾರ್ಥಿಗಳಾದ ಅನನ್ಯ ನಿಶಿತ್ ಆಟಿ ತಿಂಗಳ ವಿಶೇಷತೆಯ ಬಗ್ಗೆ ತಿಳಿಸಿದರು. ಹತ್ತನೇ ತರಗತಿ ವಿದ್ಯಾರ್ಥಿಗಳಾದ ಕುಮಾರಿ ಕೃಪಾಶ್ರೀ ಸ್ವಾಗತಿಸಿದರು.ರಕ್ಷಣ್ ವಂದಿಸಿದರು.ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.