ಬೆಳ್ತಂಗಡಿ: ಚಾರ್ಮಾಡಿ-ಪುಂಜಾಲಕಟ್ಟೆ ಹೈವೇ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ತರಲಾಗಿದ್ದು ಅದ್ಯಕ್ಷರಾಗಿ ರಕ್ಷಿತ್ ಶಿವರಾಂ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ.ಭಟ್ ಆಯ್ಕೆಯಾಗಿದ್ದಾರೆ.
ಸಲಹೆಗಾರರುಗಳಾಗಿ ಮುನೀರ್ ಕಾಟಿಪಳ್ಳ, ನಾಗೇಶ್ ಕುಮಾರ್, ಸತೀಶ್ ಕಾಶಿಪಟ್ಣ, ಉಪಾದ್ಯಕ್ಷರುಗಳಾಗಿ ಶೇಖರ ಕುಕ್ಕೇಡಿ, ಪ್ರವೀಣ್ ಹಳ್ಳಿಮನೆ, ನಮಿತ ಪೂಜಾರಿ, ನಾರಾಯಣ ಗೌಡ, ಕಾರ್ಯದರ್ಶಿಗಳಾಗಿ ಅಶ್ರಫ್ ನೆರಿಯ, ಯಶೋದರ, ಅನಿಲ್ , ಪದ್ಮನಾಭ ಸಾಲಿಯಾನ್ ಅವರನ್ನು ಆಯ್ಕೆ ಮಾಡಲಾಯಿತು.
ಆ.19ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಹೈವೇ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಹೈವೇ ಹಿತ ರಕ್ಷಣೆಗಾಗಿ ಜನಾಗ್ರಹ ಸಭೆ ನಡೆಸಲು ನಿರ್ಧರಿಸಲಾಯಿತು.
p>