

ಬೆಳ್ತಂಗಡಿ: ನಿಡ್ಲೆಯ ಆದಿತ್ಯ ವ್ಯೂನಲ್ಲಿ ನಡೆಯುತ್ತಿದ್ದ ಭಾರತೀಯ ಮಜ್ದೂರು ಸಂಘ ಕರ್ನಾಟಕ ರಾಜ್ಯದ ರಾಜ್ಯ ಅಭ್ಯಾಸ ವರ್ಗಕ್ಕೆ ದ.ಕ ಜಿಲ್ಲೆಯ ಸಂಸದ ಕ್ಯಾ.ಬ್ರಿಜೇಶ್ ಚೌಟ ಭೇಟಿ ನೀಡಿದರು.
ಈ ಸಮಯದಲ್ಲಿ ಸಂಘಟನೆ ಕಡೆಯಿಂದ ಅವರನ್ನು ಗೌರವಿಸಲಾಯಿತು.ಗೌರವ ಸ್ವೀಕರಿಸಿ, ಬಿ ಎಮ್ ಎಸ್ ಸಂಘಟನೆ ವಿಶ್ವದ ಅತೀ ದೊಡ್ಡ ಕಾರ್ಮಿಕ ಸಂಘಟನೆಯಾಗಿದೆ, ಕಾರ್ಮಿಕ ಪರವಾಗಿ ದ್ವನಿ ಎತ್ತುವ ಸಂಘಟನೆ ಈ ಸಂಘಟನೆಯ ಹೋರಾಟದ ಫಲವಾಗಿ ಕೇಂದ್ರ ಸರಕಾರವು ಕಾರ್ಮಿಕ ಕಲ್ಯಾಣಕ್ಕಾಗಿ ವಿಶ್ವ ಕರ್ಮ ಯೋಜನೆ ತಂದಿದೆ ಇದನ್ನುಅನುಷ್ಠಾನ ಮಾಡುವಲ್ಲಿ ತಮ್ಮ ಸಂಘಟನೆ ಸಹಕಾರ ಬೇಕು ಅದೇ ರೀತಿ ಕಾರ್ಮಿಕರ ಜೊತೆ ನಿಮ್ಮ ಜೊತೆ ನಾನು ಸದಾ ಇರುತ್ತೇನೆ, ಕಾರ್ಮಿಕರ ಅಬ್ಯುದಕ್ಕೆ ಮುಂದಿನ ದಿನಗಳಲ್ಲಿ ಆಧ್ಯತೆಯನ್ನು ನೀಡುತ್ತೇನೆ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ರಾಜ್ಯ ಅಧ್ಯಕ್ಷ ಎನ್ ಕೆ ಪ್ರಕಾಶ್, ರಾಜ್ಯ ಕಾರ್ಯದರ್ಶಿ ವಿಶ್ವನಾಥ್, ಜಿಲ್ಲಾ ಅಧ್ಯಕ್ಷರಾದ ಅನಿಲ್ ಕುಮಾರ್ ಯು, ಬೆಳ್ತಂಗಡಿಯ ಜಯರಾಜ್, ಉದಯ ಬಿ.ಕೆ., ಮತ್ತು ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.