


ಬೆಳ್ತಂಗಡಿ: ಲಾಯಿಲ ಗ್ರಾಮ ವ್ಯಾಪ್ತಿಯಲ್ಲಿ ಬರುವ ಲಾಯಿಲ ಮುಖ್ಯ ರಸ್ತೆಯಲ್ಲಿ ಇರುವ ಎ.ಬಿ ಸ್ಟೋರ್ ಒಳಗೆ ನುಗ್ಗಿದ ನಾಗರಹಾವು.


ಕಳೆದ ಎರಡು ದಿನಗಳಿಂದ ನಾಗರಹಾವು ಅಂಗಡಿಯ ಬಳಿ ತಿರುಗಾಡುತ್ತಿರುವುದು ಮಾಲೀಕನಿಗೆ ತಿಳಿದಿರುತ್ತದೆ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದು ನೋಡಿ ಆಗಸ್ಟ್ 3ರಂದು ಮತ್ತೆ ಕಾಣಿಸಿಕೊಂಡಿದ್ದು ಭಯ ಭೀತಗೊಂಡ ಅಂಗಡಿ ಮಾಲಕರು ತಕ್ಷಣ ಉರಗ ತಜ್ಞ ಸ್ನೇಕ್ ಅಶೋಕ್ ಲಾಯಿಲಾ ಇವರಿಗೆ ಕರೆ ಮಾಡಿ ನಾಗರಹಾವು ಸುರಕ್ಷಿತವಾಗಿ ಹಿಡಿದು ರಕ್ಷಿಸಲಾಗಿದೆ.









