ಸೌತಡ್ಕ ಸೇವಾಧಾಮದಲ್ಲಿ ಒತ್ತಡ ನಿರ್ವಹಣೆ ಬಗ್ಗೆ ಸಂವಾದಾತ್ಮಕ ಕಾರ್ಯಾಗಾರ

0

ಉಜಿರೆ: ಸೌತಡ್ಕ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ನಡೆದ ‘ಸಿಬ್ಬಂದಿಗಳ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ’ದ ಅಡಿಯಲ್ಲಿ “ಒತ್ತಡ ನಿರ್ವಹಣೆ”( Stress Management) ಕುರಿತು ಸಂವಾದಾತ್ಮಕ ಕಾರ್ಯಾಗಾರದ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಉಜಿರೆ ಎಸ್‌ಡಿಎಂ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ|ವಂದನ ಜೈನ್ ಕೇಂದ್ರದ ಸನಿವಾಸಿಗಳಿಗೆ ಹಾಗೂ ಆರೈಕೆದಾರರಿಗೆ, ಸಿಬ್ಬಂದಿ ವರ್ಗದವರಿಗೆ ಮಾಹಿತಿ ಇತ್ತರು.

ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ಒತ್ತಡ ನಿರ್ವಹಣೆ ಒಂದು ಅವಿಭಾಜ್ಯ ಅಂಗವಾಗಿದೆ. ಕೆಲಸದ ಒತ್ತಡ ಮತ್ತು ವೈಯಕ್ತಿಕ ಬದುಕು ಇದನ್ನು ಹೇಗೆ ಸಮತೋಲನ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು. ಸಂಸ್ಥೆಯ ಪರವಾಗಿ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸೇವಾಭಾರತಿಯ ಕೇಂದ್ರದ ಸನಿವಾಸಿಗಳು ಹಾಗೂ ಆರೈಕೆದಾರರು, ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯ ಕ್ಷೇತ್ರ ಸಂಯೋಜಕ ಶಶಾಂತ್ ನಿರೂಪಣೆ ಮಾಡಿ ಸ್ವಾಗತಿಸಿ, ಸೇವಧಾಮದ ಫಿಸಿಯೋಥೆರಪಿಸ್ಟ್ ಡಾ.ಸುರಕ್ಷಾ ಡಿ.ಪಿ ಧನ್ಯವಾದವಿತ್ತರು.

p>

LEAVE A REPLY

Please enter your comment!
Please enter your name here