ನೆರಿಯ: ನೆರಿಯ ಗ್ರಾಮದ ನಾರಾಯಣ ಗೌಡ ಇಟ್ಟಾಡಿ ಮನೆಯ ಬಳಿ ಗುಡ್ಡ ಕುಸಿದ ಘಟನೆ ನಡೆದಿದೆ.ಇದರ ಬೆನ್ನಲೇ ನೆರಿಯದ ಇಟ್ಟಾಡಿಯಲ್ಲಿ ಭೀಕರ ಸದ್ದು ಕೇಳಿ ಸ್ಧಳಕ್ಕೆ ಗ್ರಾಮ ಪಂ.ಅಧ್ಯಕ್ಷೆ, ಸದಸ್ಯರು ಭೇಟಿ ನೀಡಿ ಪರೀಶೀಲನೆ ನಡೆಸಿದರು.
2008ರಲ್ಲಿ ಆ.12ರಂದು ಭೀಕರ ಭೂ ಕುಸಿತವಾಗಿ ಮುಖ್ಯ ರಸ್ತೆಯ ಮೇಲೆ ಸುಮಾರು 20 ಫೀಟ್ ಮಣ್ಣು ಬಿದ್ದು ಸಂಪೂರ್ಣ ರಸ್ತೆಯ ಸಂಪರ್ಕ ಕಡಿತಗೊಂಡಿತ್ತು, ಅದೇ ರೀತಿ ಆಗುವ ಭೀತಿ ಎದುರಾಗಿದೆ. ಜನ ಭಯಭೀತರಾಗಿದ್ದಾರೆ.
ಆ.30 ಇಟ್ಟಾಡಿಯಲ್ಲಿ ಭೀಕರ ಸದ್ದು ಕೇಳಿ ಬಂದಿರುವ ಬಗ್ಗೆ ಪ್ರದೇಶ ಜನರು ಸುದ್ದಿಯ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಮತ್ತೆ ಕುಸಿತ ಆಗುವ ಭಯ ಇದೆ.ಜು.31ರಂದು ಬೆಳ್ಳಿಗೆ ಮದ್ಯಾಹ್ನ ಕಲ್ಲು ಬಿರುಕು ಬಿಟ್ಟಗೆ ಶಬ್ದ ಬಂದಿದೆ 2008ರ ಭೂ ಕುಸಿತ ಘಟನೆಯನ್ನು ನೆನಪಿಸಿಕೊಂಡರು.
ಘಟನಾ ಸ್ಧಳದಿಂದ ಸ್ಧಳಾಂತರ ಮಾಡಲು ಗ್ರಾ.ಪಂ.ಸೂಚನೆ ನೀಡಿದರು.ಸ್ಧಳಕ್ಕೆ ಗ್ರಾ. ಪಂ. ಅಧ್ಯಕ್ಷೆ ವಸಂತಿ, ಸದಸ್ಯರಾದ ಮಹಮ್ಮದ್ ಪಿ.ಬಿ.ಅಶ್ರಷ್, ಪಿ.ಡಿ.ಓ.ಸುಮ, ಕಾರ್ಯದರ್ಶಿ ಅಜಿತ್, ಗ್ರಾಮ ಸಹಾಯಕ ಶ್ರೀನಿವಾಸ್, ಪಂ.ಸಿಬ್ಬಂದಿ ಮಧುಮಾಲ ಉಪಸ್ಥಿತರಿದರು.