ಪಡಂಗಡಿ: ಪಡಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸಾಮಾನ್ಯ ಸಭೆಯು ಜು.30ರಂದು ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಮ್ಯಾಕ್ಷಿಮ್ ಸಿಕ್ವೇರಾ ಅಧ್ಯಕ್ಷತೆಯಲ್ಲಿ ಜರಗಿತು.
ದ.ಕ. ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸುಚಿತ್ರಾ ಇವರು, ಮತ್ತು ವೇಣೂರು ಪಶು ವೈದ್ಯಾಧಿಕಾರಿ ಡಾ.ಸದಾಶಿವ ಮತ್ತು ಡಾ.ಪೂಜಾ ಇವರು ಭಾಗವಹಿಸಿ ಪಶುಗಳ ಲಾಲನೆ ಪೋಷಣೆ ಬಗ್ಗೆ ಮಾಹಿತಿ ನೀಡಿದರು.ಉಪಾಧ್ಯಕ್ಷ ಕೆ.ಸುಬ್ರಮಣ್ಯ ಭಟ್, ನಿರ್ದೇಶಕರಾದ ಶ್ರೀಧರ ಪೂಜಾರಿ, ಕುಣ್ಯಾಪ್ಪ ಮೂಲ್ಯ, ಜಯರಾಜ್ ಬಿ., ದೇವಪ್ಪ ಕೆ., ಬಾಜಿಲ್ ಫೆರ್ನಾಂಡಿಸ್, ವಸಂತ ಪೂಜಾರಿ, ಸುಂದರ ಪೂಜಾರಿ, ಅಣ್ಣು ನಾಯ್ಕ,ಪ್ರಸಾದ್, ಶ್ವೇತಾ, ಅಮಿತಾ ಉಪಸ್ಥಿತರಿದ್ದರು.
ಮೇಬಲ್ ಕ್ರಾಸ್ತಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಸಂಘದ ಸಾಧಕ ಹೈನುಗಾರ ವಿಠಲ್ ಆಳ್ವ ಇವರನ್ನು ಸನ್ಮಾನಿಸಲಾಹಿತು. ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸಂಘದ ಸದಸ್ಯರುಗಳಾದ ಪೀಟರ್ ಸಿಕ್ವೇರಾ, ಸುಜಾತ, ಇವರನ್ನು ಉಡುಗೊರೆ ನೀಡಿ ಗೌರವಿಸಲಾಯಿತು.2023-24ನೇ ಸಾಲಿನ ಎಸ್.ಎಲ್.ಸಿ. ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಅತುಲ್ ಕೃಷ್ಣ, ರೀಮಾ ಮೋನಿಸ್, ವಿಜೋಲ್ ಸೆರಾವೊ, ಮತ್ತು ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕೃತಿ, ಸುವೀಕ್ಷ, ಕಾವ್ಯ, ಶ್ರೀರಕ್ಷಾ, ಮಾನಸ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಉಪಾಧ್ಯಕ್ಷ ಸುಬ್ರಮಣ್ಯ ಭಟ್ ಸ್ವಾಗತಿಸಿ, ನಿರ್ದೇಶಕ ಶ್ರೀಧರ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಸಂತ ಬಿ. ಬಂಗೇರ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಶ್ವೇತಾ ವಂದಿಸಿದರು. ಸಾಮಾನ್ಯ ಸಭೆಗೆ ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪೂಜಾರಿ, ಉಪಾಧ್ಯಕ್ಷರು, ಸದಸ್ಯರು, ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಕೇಶಿನಿ ಉಪಸ್ಥಿತರಿದ್ದರು.
ಸಿಬಂದಿಗಳಾದ ಹೊನ್ನಪ್ಪ ಕುಲಾಲ್, ಗುಲಾಬಿ, ಪ್ರವೀಣ್ ಮೋನಿಸ್ ಸಹಕರಿಸಿದರು.