ತಣ್ಣೀರುಪಂತ: ತಣ್ಣೀರುಪಂತ ಗ್ರಾಮ ಪಂಚಾಯತ್ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಅಧ್ಯಕ್ಷೆ ಹೇಮಾವತಿ ಎಂ ಅಧ್ಯಕ್ಷತೆಯಲ್ಲಿ ಜು.30ರಂದು ಕಲ್ಲೇರಿ ಬಾಪೂಜಿ ಸೇವಾ ಕೇಂದ್ರದಲ್ಲಿ ನಡೆಯಿತು. ಮಾರ್ಗದರ್ಶಿ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶೇಷಗಿರಿ ನಾಯಕ್ ಸಭೆಯನ್ನು ಮುನ್ನಡೆಸಿದರು.
ಎಲ್ಲಾ ಇಲಾಖೆಗಳ ಅಧಿಕಾರಿಗಳು ಬರೆದಿದ್ದಾರೆ ಗ್ರಾಮ ಸಭೆ ಯಾರಿಗೆ. ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಯಾಕೆ ಗ್ರಾಮ ಸಭೆಗೆ ಬರುವುದಿಲ್ಲ ನಮ್ಮ ಸಮಸ್ಯೆಗಳನ್ನು ಯಾರಲ್ಲಿ ತಿಳಿಸುವುದು.ಅಧಿಕಾರಿಗಳು ಗ್ರಾಮ ಸಭೆ ಕಡ್ಡಾಯವಾಗಿ ಬರಬೇಕು ಎಂದು ಸಭೆಯ ಪ್ರಾರಂಭದಲ್ಲಿಯೇ ಗ್ರಾಮಸ್ಥ ಮಿಥುನ್ ಕುಲಾಲ್ ಅಳಕ್ಕೆ ಆಗ್ರಹಿಸಿದರು. ಗ್ರಾಮ ಪಂಚಾಯತ್ ನಲ್ಲಿ 20 ಸದಸ್ಯರ ಪೈಕಿ 14 ಮಂದಿ ಹಾಜರಿದ್ದಾರೆ. ಉಳಿದವರು ಸದಸ್ಯರಾಗಿ ಆಯ್ಕೆಯಾದರು ಗ್ರಾಮ ಸಭೆಗೆ ಯಾಕೆ ಬರುತ್ತಿಲ್ಲ ನಮ್ಮ ವಾರ್ಡ್ ಗಳ ಸಮಸ್ಯೆಗಳನ್ನು ಯಾರಲ್ಲಿ ತಿಳಿಸುವುದು. ವಾರ್ಡ್ ಗೆ ಸಂಬಂಧಿಸಿದ ಬೇರೆ ಸದಸ್ಯರು ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥ ಕೆ.ಎಸ್. ಅಬ್ದುಲ್ ಆಕ್ರೋಶ ವ್ಯಕ್ತಪಡಿಸಿದರು. 4 ಮಂದಿ ಸದಸ್ಯರಿಗೆ ಅನಾರೋಗ್ಯ ನಿಮಿತ್ತ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಸದಸ್ಯ ಮಹ್ಮದ್ ನಿಸಾರ್ ಹೇಳಿದರು.
ಉಪಾಧ್ಯಕ್ಷೆ ಪ್ರಿಯಾ, ಸದಸ್ಯರುಗಳಾದ ಅನಿಲ್ ಪಾಲೇದು, ಸಾಮ್ರಾಟ್, ಸದಾನಂದ ಶೆಟ್ಟಿ, ನವೀನ್, ತಾಜುದ್ದೀನ್, ಮಹ್ಮದ್ ಆಶ್ರಫ್, ಸುಧಾ ಎಂ. ಮತ್ತಿತರರು ಸದಸ್ಯರು ಹಾಜರಿದ್ದರು.
ಮೆಸ್ಕಾಂ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಆರೋಗ್ಯ, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪಿಡಿಓ ಶ್ರವಣ್ ಕುಮಾರ್ ಜಮಾ ಖರ್ಚಿನ ವರದಿ ವಾಚಿಸಿದರು.ಸದಸ್ಯ ಜಯವಿಕ್ರಮ್ ಸ್ವಾಗತಿಸಿದರು.