ಉಜಿರೆ: ಎಸ್‌.ಡಿ.ಯಂ ಇಂಜಿನಿಯರಿಂಗ್‌ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಕಬಡ್ಡಿಯಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ್ದ ಕು.ಚಿನ್ಮಯಿರವರ ಪ್ರಾಯೋಜಕತ್ವದಲ್ಲಿ ಕ್ರೀಡಾ ಕಿಟ್‌ಗಳನ್ನು ಕ್ರೀಡಾ ವಿಭಾಗದಲ್ಲಿ ಸಾಧನೆಗೈದಿರುವ ವಿದ್ಯಾರ್ಥಿಗಳಿಗೆ ವಿತರಣೆ

0

ಉಜಿರೆ: ಎಸ್‌.ಡಿ.ಯಂ ಇಂಜಿನಿಯರಿಂಗ್‌ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಕಬಡ್ಡಿಯಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ್ದ  ಕು.ಚಿನ್ಮಯಿ ತಮ್ಮ ಪ್ರಾಯೋಜಕತ್ವದಲ್ಲಿ ಕ್ರೀಡಾ ಕಿಟ್‌ಗಳನ್ನು ಕಾಲೇಜಿನ ಕ್ರೀಡಾ ವಿಭಾಗದಲ್ಲಿ ಸಾಧನೆಗೈದಿರುವ ವಿದ್ಯಾರ್ಥಿಗಳಿಗೆ ಜು.13ರಂದು ವಿತರಿಸಿದರು.

ಈ ಸಂದರ್ಭದಲ್ಲಿ ಕಾಲೇಜು ನೀಡಿರುವ ಪ್ರೋತ್ಸಾಹ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರ ನಿರಂತರ ತರಬೇತಿಯನ್ನು ಕು. ಚಿನ್ಮಯಿ ನೆನಪಿಸಿಕೊಂಡರು.

ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್‌ಕುಮಾರ್‌, ಚಿನ್ಮಯಿಯವರ ಈ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಈ ಕಾರ್ಯ ಇತರರಿಗೆ ಮಾದರಿಯಾಗಲಿ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಭಾಕರ್‌ ಮತ್ತು ನಿತಿನ್‌ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚಿರಂತ್‌ ಸ್ವಾಗತಿಸಿ, ಪ್ರದೀಪ್‌ ವಂದಿಸಿದರು. ಪುನೀತ್‌ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here