ಉಜಿರೆ: ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಉಜಿರೆ ಗ್ರಾಮ ಪಂಚಾಯತಿನಲ್ಲಿ ನಿರ್ಮಾಣಗೊಂಡು ಕಾರ್ಯ ನಿರ್ವಹಿಸುತ್ತಿರುವ ಮಲತ್ಯಾಜ್ಯ ನಿರ್ವಹಣಾ ಘಟಕದ ಮಾಹಿತಿ ಪಡೆಯಲು ಲಕ್ಷದ್ವೀಪ ರಾಜ್ಯದ ಅಧಿಕಾರಿಗಳ ತಂಡ ಜು.24ರಂದು ಉಜಿರೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಉಜಿರೆ ಗ್ರಾಮ ಪಂಚಾಯತ್ ಕಛೇರಿ ಆಡಳಿತ ವ್ಯವಸ್ಥೆ, ಡಿಜಿಟಲ್ ಗ್ರಂಥಾಲಯ, ಕಸನಿರ್ವಹಣಾ ವ್ಯವಸ್ಥೆ, ಮಾದರಿ ಸಭಾಂಗಣ ಮೊದಲಾದ ಉತ್ತಮ ಅಂಶಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಂಡದಲ್ಲಿ ಲಕ್ಷದ್ವೀಪ ರಾಜ್ಯದ ಅಧಿಕಾರಿಗಳಾದ, ಸಿ ಸುಪರಿಟೆಂಟ್ ಇಂಜಿನಿಯರ್ ಸಿ.ಎನ್.ರಹಜಾನ್, ಪಿ.ಪೊಕೊಯ್ಯ DST, ಮುಶಿನ್ ವಿಜ್ಞಾನಿ, ಅಬ್ದುಲ್ ಜಾಬ್ಬರ್, ಭಾಗವಹಿಸಿದರು.
ಈ ಸಂದರ್ಭದಲ್ಲಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಹೆಚ್.ಪ್ರಕಾಶ್ ಶೆಟ್ಟಿ, ಬೆಳ್ತಂಗಡಿ PRED AEE, ನಿತಿನ್ ಕುಮಾರ್, A.E ಹರ್ಷಿತ್, ಬಂಟ್ವಾಳ ತಾಲೂಕು ಸಹಾಯಕ ನಿರ್ದೇಶಕ ವಿಶ್ವನಾಥ್, ದ.ಕ.ಜಿಲ್ಲಾ ಪಂಚಾಯತ್ SBM ಶಾಖೆಯ ಡೊಂಬಯ್ಯ ರಾಜ್ಯ CDD ಸಂಸ್ಥೆಯ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.