ಬಂದಾರು: ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25 ಗಂಟೆಗಳ ನಿರಂತರ ಯೋಗ ತರಬೇತಿ- ಗ್ರಾಮ ಸಭೆಯಲ್ಲಿ ಬಿತ್ತಿ ಪತ್ರ ಅನಾವರಣ- ಗ್ರಾಮಸ್ಥರ ಬೆಂಬಲ

0

ಬೆಳ್ತಂಗಡಿ: ಯೇನಪೋಯ ಮೆಡಿಕಲ್ ಕಾಲೇಜು, ಯೇನಪೋಯ ವಿಶ್ವವಿದ್ಯಾಲಯ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಯೋಗದ ಜಾಗೃತಿ ಮೂಡಿಸಲು ಭವಿಷ್ಯದ ದುಃಖಗಳನ್ನು ದೂರ ಮಾಡಲು ಯೋಗ ಎಂಬ ಧ್ಯೇಯ ದೊಂದಿಗೆ ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿಯು ಜು.22 ಮತ್ತು 23ರ 10 ಗಂಟೆಯವರೆಗೆ 25 ಗಂಟೆಗಳ ನಿರಂತರ ಯೋಗ ತರಬೇತಿ ಬಿತ್ತಿ ಪತ್ರವನ್ನು ಜು.20ರಂದು ನಡೆದ ಗ್ರಾಮ ಸಭೆಯಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಖಂಡಿಗ ಅನಾವರಣಗೊಳಿಸಿದರು.

ಯೋಗ ಗುರು ಕುಶಾಲಪ್ಪ ಗೌಡ ರವರು ತಲಾ ಒಂದೂವರೆ ಗಂಟೆಯ 17 ಬ್ಯಾಚ್ ಗಳಲ್ಲಿ ತರಬೇತಿ ನೀಡಲಿದ್ದು, ಭಾಗವಹಿಸುವ ಶಿಬಿರಾರ್ಥಿಗಳಿಗೆ ರೂಪಾಯಿ 500 ಮೌಲ್ಯದ ಯೋಗ ಪುಸ್ತಕ, ಯೋಗ ಭಟ್ಟೆ, ಯೋಗ ಕ್ಯಾಲೆಂಡರ್,ಯೋಗ ಪ್ರಮಾಣ ಪತ್ರ ಮತ್ತು ಉಪಹಾರ ನೀಡಲಾಗುತ್ತದೆ.ಮುಗೇರಡ್ಕ ಸರ್ಕಾರಿ ಶಾಲಾ ಸೇವಾ ಟ್ರಸ್ಟ್ ನಾ ವಿದ್ಯಾನಿಧಿಗಾಗಿ ಆಯೋಜಿಸಿರುವ ಈ ಶಿಬಿರಕ್ಕೆ ವಿದ್ಯಾರ್ಥಿಗಳಿಂದ ರೂಪಾಯಿ 100, ಸಾರ್ವಜನಿಕರಿಂದ ರೂಪಾಯಿ 200 ನ್ನು ದೇಣಿಗೆ ರೂಪದಲ್ಲಿ ಪಡೆಯಲಾಗುವುದು. ಮೂರು ವಿಶ್ವ ದಾಖಲೆಯ ಪ್ರಯತ್ನ, ಮ್ಯಾರಥಾನ್ ಯೋಗ ಶಿಬಿರ ತರಬೇತಿಯ ಮೂಲಕ ಮೂರು ವಿಶ್ವ ದಾಖಲೆಯನ್ನು ಸಾರಿಸಲು ಪ್ರಯತ್ನಿಸಲಾಗುತ್ತದೆ.ತರಬೇತಿಯಲ್ಲಿ 2500 ಕ್ಕೂ ಮಿಕ್ಕಿ ವಿವಿಧ ವೈದ್ಯಕೀಯ ವಿದ್ಯಾರ್ಥಿಗಳು ತರಬೇತಿಯಲ್ಲಿ ಭಗವಹಿಸಲಿಧದು, ,4000ಕ್ಕೂ ಮಿಕ್ಕಿ ಯೋಗ ಶಿಬಿರಾರ್ಥಿಗಳಿಗೆ ತರಬೇತಿ ಪಡೆಯಲಿದ್ದಾರೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟ್ರಸ್ಟಿಗಳಾದ ಬಾಲಕೃಷ್ಣ ಗೌಡ ಮುಗೇರಡ್ಕ, ರಮೇಶ್ ಗೌಡ ನೆಕ್ಕರಾಜೆ, ಮಾಜಿ ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ, ಹಳೆ ವಿದ್ಯಾರ್ಥಿ ದುಷ್ಯಂತ ಗೌಡ, ನಿವೃತ ಕೆ ಸ್ ರ್ ಟಿ ಸಿ ಅಧಿಕಾರಿ ಕೇಶವ ಗೌಡ ಅಶೋಕ ನಿಲಯ, ವಿನಯ್ ಕುಮಾರ್ ಬರುಗುಡೆಲ್, ಗ್ರಾ.ಪಂ.ಉಪಾಧ್ಯಕ್ಷೆ ಪುಷ್ಪವತಿ, ಸದಸ್ಯರಾದ ಪರಮೇಶ್ವರಿ ಗೌಡ, ಗಂಗಾಧ‌ರ್ ಪೂಜಾರಿ, ಸುಚಿತ್ರ, ಪವಿತ್ರ, ಚೇತನ, ವಿಮಲಾ, ಮೋಹನ್, ಅನಿತಾ, ಭಾರತಿ, ಶಿವ ಗೌಡ, ಶಿವಪ್ರಸಾದ್, ಮಂಜುಶ್ರೀ, ಶಾಂತ ಹಾಗೂ ಗ್ರಾಮಸ್ಥರು ಸಿಬ್ಬಂದಿ ವರ್ಗದರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here