

ಇಂದಬೆಟ್ಟು: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕಿನಲ್ಲಿ 19 ವಾತ್ಸಲ್ಯ ಕುಟುಂಬದ 27 ಮಂದಿ ಮಕ್ಕಳಿಗೆ ವಾತ್ಸಲ್ಯ ನಿಧಿ ಮಂಜೂರಾಗಿದ್ದು, ಇಂದಬೆಟ್ಟುನಲ್ಲಿ ವಾಸ ಇರುವ ರಮೇಶ್ ರವರು ತಿಂಗಳ ಮಾಶಾಸನ ಪಡೆಯುತ್ತಿದ್ದು. ಮನೆಯಲ್ಲಿ ತನ್ನ 11 ವರ್ಷದ ಮಗನ ಜೊತೆ ವಾಸವಾಗಿದ್ದರು.
ರಮೇಶ್ ರವರ ಪತ್ನಿ ಹೃದಯಾಘಾತದಿಂದ ಮರಣ ಹೊಂದಿದ್ದು, ಪ್ರಸ್ತುತ ರಮೇಶ್ ಮತ್ತು ಅವರ ಮಗ ಮಾತ್ರ ಇದ್ದು. ಪ್ರಸ್ತುತ ರಮೇಶ್ ಅನಾರೋಗ್ಯ ಕಾರಣ ಮರಣ ಹೊಂದಿರುತ್ತಾರೆ. ಮಗ 6ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು.ಪ್ರಸ್ತುತ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಬಡ ಕುಟುಂಬಕ್ಕೆ ವಾತ್ಸಲ್ಯ ನಿಧಿ ಕಾರ್ಯಕ್ರಮದಲ್ಲಿ ಮಂಜೂರಾದ ಬಟ್ಟೆ, ಸ್ಕೂಲ್ ಬ್ಯಾಗ್, ಬುಕ್ ನ್ನು ಉಜಿರೆ ಅಮೃತ ಸಿಲ್ಕ್ ಮಾಲಕ ಪ್ರಶಾಂತ್ ಜೈನ್ ರವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜ್ಞಾನ ವಿಕಾಸ ಸಮನ್ಮಯಧಿಕಾರಿ ಮಧುರ ಉಪಸ್ಥಿತರಿದ್ದರು.