ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಬಾಯಿತ್ಯಾರು ಸಮೀಪದ ಪಿಲತ್ತಾಜೆ ಎಂಬಲ್ಲಿ ಕಳೆದೆರಡು ದಿನಗಳಿಂದ ಕಾಡಾನೆಗಳು ತೋಟಗಳಿಗೆ ಬರುತ್ತಿದ್ದು, ಅಡಿಕೆ, ತೆಂಗು, ಬಾಳೆಗಿಡಗಳನ್ನು ನಾಶ ಮಾಡಿವೆ.
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಪಿಲತ್ತಾಜೆ ಎಂಬಲ್ಲಿಗೆ ಭಾರಿ ಮಳೆಯ ನಡುವೆಯೂ ಆನೆಗಳು ರಾತ್ರಿ ಹೊತ್ತು ಬರುತ್ತಿವೆ. ಮಂಗಳವಾರ ಮತ್ತು ಬುಧವಾರ ರಾತ್ರಿ ಬಂದಿರುವ ಆನೆಗಳು ದೇವರಾಜ ಗೌಡ ಮತ್ತು ವಿಠಲ ಪೂಜಾರಿ ಎಂಬವರ ತೋಟಗಳಿಗೆ ನುಗ್ಗಿ ಅಡಿಕೆ ಮರ, ಗಿಡಗಳು, ತೆಂಗಿನ ಗಿಡ, ಬಾಳೆಗಿಡಗಳನ್ನು ಧ್ವಂಸಗೊಳಿಸಿವೆ. ಆನೆಗಳು ಅಡ್ಡಾಡಿರುವುದರಿಂದ ಪೈಪ್‌ಲೈನ್‌ಗಳಿಗೂ ಹಾನಿಯಾಗಿದೆ. ಚಂದ್ರ ಪೂಜಾರಿಯವರ ಮರದಿಂದ ಹಲಸು ಕಿತ್ತು ತಿಂದಿವೆ.
p>