ಕೊಲ್ಪಾಡಿ ಪೌಷ್ಠಿಕ ಆಹಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮ

0

ಬೆಳಾಲು: ಶ್ರೀ ಕ್ಷೇತ್ರ ಧರ್ಮಾಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬೆಳಾಲು ಕೊಲ್ಪಾಡಿ ಓಂ ಶ್ರೀ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಮಾಹಿತಿ ಕಾರ್ಯಕ್ರಮವನ್ನು ಜು.14ರಂದು ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮಪಂಚಾಯತ್ ಅಧ್ಯಕ್ಷ ವಿದ್ಯಾ ಶ್ರೀನಿವಾಸ್ ಗೌಡ ರವರು ನೆರವೆರಿಸಿ ಆಷಾಡ ಮಾಸದಲ್ಲಿ ಸೇವಿಸುವ ಆಹಾರಗಳ ಬಗ್ಗೆ ವೈಜ್ಞಾನಿಕವಾಗಿ ಪ್ರಾಮುಖ್ಯತೆ ಏನು ಎಂಬುವುದರ ಬಗ್ಗೆ ತಿಳಿಸಿದರು.ಸದೃಢ ಆರೋಗ್ಯ ನಿರ್ವಹಣೆಗೆ ಪೌಷ್ಠಿಕ ಆಹಾರ ತುಂಬಾ ಅವಶ್ಯಕವಾಗಿದ್ದು ಹಲವಾರು ರೋಗ ರುಜಿನಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾದ ಉಷಾ ಸಮತೋಲನ ಆಹಾರದ ಬಗ್ಗೆ ದೀರ್ಘಕಾಲ ಕಾಡುವ ಕಾಯಿಲೆಗಳನ್ನು ತಡೆಗಟ್ಟಲು ಆಗಾದವಾದ ಪೌಷ್ಠಿಕಾಂಶಗಳನ್ನು ಒಳಗೊಂಡ ರೋಗನಿರೋದಕ ಶಕ್ತಿಯಿರುವ ಪ್ರೊಟೀನ್ ಅಂಶವುಳ್ಳ ಆಹಾರಗಳ ಸೇವನೆ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷೆ ನೀಲಾವತಿ ಸೇವಾಪ್ರತಿನಿಧಿ ಪ್ರಮೀಳಾರ ವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಸದಸ್ಯರಾದ ಮಂಜುಳಾ ರವರು ವಹಿಸಿದ್ದರು. ಕೇಂದ್ರದ ಸದಸ್ಯರಾದ ಗುಲಾಬಿಯವರು ಸ್ವಾಗತಿಸಿ ಲಲಿತಾ ಧನ್ಯವಾದಗೈದರು. ಸಮನ್ವಯಧಿಕಾರಿ ಮಧುರರವರು ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here