ತಣ್ಣೀರುಪಂತ: ಕಲ್ಲೇರಿ ಒತ್ತುವರಿ ಭೂಮಿ ಗ್ರಾಮ ಪಂಚಾಯತ್ ಸ್ವಾಧೀನ

0

ತಣ್ಣೀರುಪಂತ: ಗ್ರಾಮ ಪಂಚಾಯತ್ ಕಲ್ಲೇರಿ ಪೇಟೆಯ ಹೃದಯ ಭಾಗದಲ್ಲಿ ಕಾದಿರಿಸಿದ 20 ಅತಿಕ್ರಮಣಕ್ಕೆ ಒಳಗಾದ ಬಳಿಕ ಕಾನೂನು ಹೋರಾಟ ನಡೆಸಿ ಇದೀಗ ಭೂಮಾಪಕರಿಂದ ಅಳತೆ ಕಾರ್ಯ ಮಾಡಿಸಿ ಜಾಗವನ್ನು ತನ್ನ ಸ್ವಾಧೀನಕ್ಕೆ ಪಡೆಯಿತು.

ಆರು ವರ್ಷಗಳ ಹಿಂದೆ ಪಂಚಾಯತ್ ರೈತಾಪಿ ವರ್ಗದವರಿಗಾಗಿ ಕಲ್ಲೇರಿ ಪೇಟೆಯಲ್ಲಿ ಕೃಷಿ ಮಾರುಕಟ್ಟೆಗೆ 48 ಸೆಂಟ್ಸ್ ಭೂಮಿ ಕಾದರಿಸಿತ್ತು ಖಾಸಗಿಯವರ ಅತಿಕ್ರಮಣದಿಂದ ಪಂಚಾಯತ್ ಆಡಳಿತಕ್ಕೆ ಕಗ್ಗಂಟಾಗಿ ನ್ಯಾಯಾಲಯದ ಮೊರೆಹೋಗಿತ್ತು. ನ್ಯಾಯಾಲಯ ಭೂಮಿಯನ್ನು ಪಂಚಾಯತ್‌ಗೆ ಬಿಟ್ಟುಕೊಡಲು ಆದೇಶಿಸಿತು.

ಅದರಂತೆ ಬೆಳ್ತಂಗಡಿ ತಾಲೂಕು ದಂಡಾಧಿಕಾರಿ ಪೃಥ್ವಿ ಸಾನಿಕಂ ಅವರ ಉಪಸ್ಥಿತಿಯಲ್ಲಿ ಭೂಮಾಪಕರಿಂದಅಳತೆ ಕಾರ್ಯ ನಡೆದು ಆರು ಅಂಗಡಿ ಕೋಣೆಗಳ ಸಹಿತ ಭೂಮಿಯನ್ನು ಗ್ರಾ.ಸ್ವಾಧೀನ ಪಡಿಸಿಕೊಂಡಿತು.

ಗ್ರಾ.ಪಂ. ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷೆ ಪ್ರಿಯಾ, ಸದಸ್ಯರಾದ ಜಯ ವಿಕ್ರಮ ಕಲ್ಲಾಪು ಸದಾನಂದ ಶೆಟ್ಟಿ ಮಡಪ್ಪಾಡಿ ಅಯೂಬ್, ಲೀಲಾ ವತಿ, ಸಾಮ್ರಾಟ್, ಗ್ರಾ.ಪಂ. ಮಾಜಿ ಸದಸ್ಯ ಕೆ.ಎಸ್ ಅಬ್ದುಲ್ಲಾ, ಕಂದಾಯ ನಿರೀಕ್ಷಕರಾದ ಪಾವಡಪ್ಪ ದೊಡ್ಡಮನಿ, ಪ್ರಭಾರ ಪಿಡಿಒ ಶ್ರವಣ್‌ ಕುಮಾರ್, ಕಾರ್ಯದರ್ಶಿ ಆನಂದ ಉಪಸ್ಥಿತರಿದ್ದರು.

ಉಪ್ಪಿನಂಗಡಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

LEAVE A REPLY

Please enter your comment!
Please enter your name here