ಬೆಳ್ತಂಗಡಿ: ಸಂತ ತೆರೇಸಾ ಸಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವನಮಹೋತ್ಸವವನ್ನು ಹಾಗೂ ವಿವಿಧ ಸಂಘಗಳನ್ನು ಜು.11ರಂದು ಉದ್ಘಾಟಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಲಯ ಸಂರಕ್ಷಣಾಧಿಕಾರಿ ಶ್ರೀಧರ್ ರವರು ಆಗಮಿಸಿದ್ದು ಸಸಿ ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಾಡು ಮಳೆ ಹಾಗೂ ಸಸಿ ನೆಡುವುದರ ಮಾಹಿತಿಯನ್ನು ನೀಡಿದರು ಹಾಗೂ ವಿದ್ಯಾರ್ಥಿಗಳ ಹುಟ್ಟುಹಬ್ಬದಂದು ಒಂದು ಸಸಿಯನ್ನು ನೆಟ್ಟು ಪರಿಸರವನ್ನು ಉಳಿಸಲು ಕರೆಕೊಟ್ಟು ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಸಸಿಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನದಲ್ಲಿ ಸಂತ ತೆರೇಸಾ ಶಿಕ್ಷಣ ಸಂಸ್ಥೆಗಳ ಸಂಚಾಲಕಿ ಭಗಿನಿ ತೆರೇಸಿಯಾ ಸೆರಾ ತಮ್ಮ ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಕಾಲೇಜಿನ ಪ್ರಾಂಶುಪಾಲೆ ಭಗಿನಿ ಆರೋಗ್ಯರವರು ಹಾಗೂ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾಕ್ಟರ್ ಹೆರಾಲ್ಡ್ ನೋರೋನ್ನರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳ್ತಂಗಡಿ ಶಾಖೆಯ ವಲಯ ಅಧಿಕಾರಿಗಳಾದ ರವೀಂದ್ರ ಹಾಗೂ ಸಂದಿಪ್ ಹಾಗೂ ಶ್ರೀ ಗಫೂರವರು ಆಗಮಿಸಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಿವಿಧ ಸಂಘಗಳಾದ ಸಾಂಸ್ಕೃತಿಕ ಸಂಘ, ಪರಿಸರ ಸಂಘ, ವಿಜ್ಞಾನ ಸಂಘ, ಹಾಗೂ ಈ ಎಲ್ ಸಿ ಸಂಘಗಳನ್ನು ಉದ್ಘಾಟಿಸಲಾಯಿತು. ಎಲ್ಲಾ ಸಂಘದ ಸದಸ್ಯರು ತಮ್ಮ ಮೇಲ್ವಿಚಾರಕರ ಜೊತೆಗೂಡಿ ವಿವಿಧ ಕಾರ್ಯಕ್ರಮಗಳನ್ನು ನೀಡಿದರು.
ವಿಜ್ಞಾನ ವಿಭಾಗದ ಉಪನ್ಯಾಸಕಿ ಅರ್ಚನಾರವರ ನಿರೂಪಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಸಿಲ್ವಿಯಾರವರು ಸ್ವಾಗತಿಸಿ, ನಿರೀಕ್ಷಾ ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದದವರು ಕಚೇರಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.