ಬೆಳ್ತಂಗಡಿ: ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಕೊಡಗು ಈ 4 ಕಂದಾಯ ಜಿಲ್ಲೆಗಳನ್ನೊಳಗೊಂಡ 120 ಲಯನ್ಸ್ ಕ್ಲಬ್ ಗಳಲ್ಲಿ ಸೇವೆ ಮತ್ತು ಇತರ ಎಲ್ಲಾ ವಿಭಾಗಗಳ್ಳಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ ಬೆಳ್ತಂಗಡಿ ಲಯನ್ಸ್ ಕ್ಲಬ್ ಜು.6 ರಂದು ಮುಲ್ಕಿ ಸುಂದರರಾಮ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಥಮ ಪ್ರಶಸ್ತಿ ಸ್ವೀಕರಿಸಿದೆ.
ಸುವರ್ಣ ಸಂಭ್ರಮದಲ್ಲಿರುವ ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ 50 ವರ್ಷದ ಇತಿಹಾಸದಲ್ಲಿ ಇದು ಎರಡನೇ ಬಾರಿಯ ಜಿಲ್ಲಾ ಪ್ರಥಮ ಪ್ರಶಸ್ತಿಯ ಗರಿಯಾಗಿದ್ದು, ಲ. ಉಮೇಶ್ ಶೆಟ್ಟಿ ಅವರ ಬಳಗದ ಸಾಧನೆಗೆ ಜಿಲ್ಲೆಯ ಉನ್ನತ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.
ರಾಜ್ಯಪಾಲರ ಸಂಪುಟದ ಅಂತಿಮ ತೀರ್ಮಾನದಂತೆ 2023-24 ನೇ ಸಾಲಿನ ಅಧ್ಯಕ್ಷ ಉಮೇಶ್ ಶೆಟ್ಟಿ ಅತ್ಯುತ್ತಮ ಅಧ್ಯಕ್ಷರಾಗಿ ಮೂಡಿಬಂದಿದ್ದಾರೆ. ಅನಂತಕೃಷ್ಣ ಅತ್ಯುತ್ತಮ ಕಾರ್ಯದರ್ಶಿಯಾಗಿ, ಸುಭಾಷಿಣಿಯವರು ಅತ್ಯುತ್ತಮ ಕೋಶಾಧಿಕಾರಿಯಾಗಿ ಪ್ರಶಸ್ತಿ ಸ್ವೀಕರಿಸಿದರು.
ಜಿಲ್ಲಾ ಸಂಪುಟ ಸಹೋದ್ಯೋಗಿಗಳಿಗೂ ಪ್ರಶಂಸನಾ ಪ್ರಶಸ್ತಿ: ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ.ಮೇಲ್ವಿನ್ ಡಿಸೋಜ ದಂಪತಿ, ತಮ್ಮ ಜಿಲ್ಲಾ ಸಂಪುಟದಲ್ಲಿ ಸೇವೆ ನೀಡಿರುವ ವಸಂತ ಶೆಟ್ಟಿ ಶ್ರದ್ಧಾ( ಗೋಲ್ಡನ್ GET ಕಾರ್ಡಿನೇಟರ್), ಧರಣೇಂದ್ರ ಕೆ ಜೈನ್ (ಅಸೋಸಿಯೇಟ್ ಡಿಸ್ಟಿಕ್ಟ್ GLT ಕಾರ್ಡಿನೇಟರ್), ರಾಜು ಶೆಟ್ಟಿ (GMT ಕಾರ್ಡಿನೇಟರ್), ನಿತ್ಯಾನಂದ ನಾವರ (ಅಸೋಸಿಯೇಟ್ ಡಿಸ್ಟಿಕ್ಟ್ GST ಕಾರ್ಡಿನೇಟರ್), ಪ್ರಕಾಶ್ ಶೆಟ್ಟಿ ನೊಚ್ಚ (ಡೈಮಂಡ್ ರೀಜನ್ ಅಂಬಸೆಡೋರ್), ಡಾ. ದೇವಿಪ್ರಸಾದ್ ಬೊಲ್ಮ (ಡೈಮಂಡ್ ಝೋನ್ ಕಾರ್ಡಿನೇಟರ್), ಹೇಮಂತ್ ರಾವ್ ಯರ್ಡೂರ್ (ಡೈಮಂಡ್ ಜಿಲ್ಲಾ ಸಂಯೋಜಕರು (ಹಸಿವು), ವಿಶ್ವನಾಥ್ ಆರ್ ನಾಯಕ್ (ಜಿಲ್ಲಾ ಸಂಯೋಜಕರು (ಇಮೇಜ್ ಬಿಲ್ಡಿಂಗ್),ಅಶ್ರಫ್ ಆಲಿಕುಂಞಿ ( ಗೋಲ್ಡನ್ ಅಸೋಸಿಯೇಟ್ ಜಿಲ್ಲಾ ಸಹ ಸಂಯೋಜಕರು (ಈದ್ ಸಂಭ್ರಮ) ವಿನ್ಸೆಂಟ್ ಟಿ ಡಿಸೋಜಾ (ಸಿಲ್ವರ್ ಜಿಲ್ಲಾ ಸಹಸಂಯೋಜಕರು (ಸರಕಾರಿ ಯೋಜನೆ)ಇವರುಗಳು ರಾಜ್ಯಪಾಲರ ಪ್ರಶಂಸನಾ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಈ ವೇಳೆ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯ ಎಂ. ಜಿ. ಶೆಟ್ಟಿ, ಸದಸ್ಯರುಗಳಾದ ರಾಮಕೃಷ್ಣ ಗೌಡ, ಜಯರಾಮ್ ಭಂಡಾರಿ, ಸುಶೀಲ ಎಸ್ ಹೆಗ್ಡೆ, ಮೇದಿನಿ ಡಿ ಗೌಡ, ಕೃಷ್ಣ ಕೆ. ಆಚಾರ್, ರಘುರಾಮ ಶೆಟ್ಟಿ ಸಾಧನಾ, ರಮೇಶ್ ಕುಮಾರ್ ಧನಲಕ್ಷ್ಮೀ, ದಿನೇಶ್ ಎಂ ಎಸ್ ದಿಶಾ, ದತ್ತಾತ್ರೇಯ ಗೊಲ್ಲ, ಜಗನ್ನಾಥ್ ಶೆಟ್ಟಿ, ಸವಿತಾ ಉಮೇಶ್ ಶೆಟ್ಟಿ, ಪುಷ್ಪಾವತಿ ಎನ್ ನಾವರ, ಮಂಜುನಾಥ್ ಜಿ, ದೇವರಾಜ್, ಹೇಮಲತಾ, ನಾಣ್ಯಪ್ಪ, ಸುಂದರಿ, ಚಂದ್ರಶೇಖರ ಶೆಟ್ಟಿ, ಅಮಿತಾನಂದ ಹೆಗ್ಡೆ, ಕಿರಣ್ ಕುಮಾರ್ ಶೆಟ್ಟಿ, ಪ್ರಭಾಕರ್ ಗೌಡ ಬೊಲ್ಮ, ಕೃಷ್ಣ ಶೆಟ್ಟಿ ಧರ್ಮಸ್ಥಳ, ಪಂಚಾಕ್ಷರಪ್ಪ, ಲಿಯೋ ಕ್ಲಬ್ ಕಾರ್ಯದರ್ಶಿ ನಿರೀಕ್ಷಾ ಎನ್ ನಾವರ ಹಾಗೂ ಲಿಯೋ ಸದಸ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.