ಅಳದಂಗಡಿ: ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತನ್ನು ಶಾಲಾ ಸಂಚಾಲಕ ವಂ.ಫಾ.ಎಲಿಯಾಸ್ ಡಿ’ಸೋಜ ಹಾಗೂ ಅತಿಥಿ ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.
ಶಾಲಾ ನಾಯಕನಾಗಿ ಡಿಯೋನ್ ಪ್ರಿನ್ಸ್ ಡಿ’ಸೋಜ 10ನೇ ತರಗತಿ, ಉಪನಾಯಕಿಯಾಗಿ ಪ್ರತೀಕ್ಷಾ 9ನೇ ತರಗತಿ , ಶಿಸ್ತು ಮಂತ್ರಿಯಾಗಿ ಸುಶಾಂತ್ ಜೈನ್, ಉಪಶಿಸ್ತು ಮಂತ್ರಿಯಾಗಿ ಜೆನಿಫರ್ ಫೆರ್ನಾಂಡಿಸ್, ಆರೋಗ್ಯ ಮಂತ್ರಿಯಾಗಿ ಅಮೃತ್, ಉಪ ಆರೋಗ್ಯ ಮಂತ್ರಿಯಾಗಿ ಮೇಲ್ಸ್ಟನ್ ಕ್ರಾಸ್ತಾ, ಕ್ರೀಡಾ ಮಂತ್ರಿಯಾಗಿ ವೈಭವ್ ಹೆಗ್ಡೆ, ಉಪ ಕ್ರೀಡಾ ಮಂತ್ರಿಯಾಗಿ ಅನ್ವಿಷ ಸಾನಿಕ ಪಾಯ್ಸ್, ಸಾಂಸ್ಕೃತಿಕ ಮಂತ್ರಿಯಾಗಿ ಆಕಾಶ್, ಸ್ಪೀಕರ್ ಡಿಯೋನ ಪರ್ಲ್ ಕ್ರಾಸ್ತಾ, ವಿರೋಧ ಪಕ್ಷದ ನಾಯಕಿಯಾಗಿ ಹರ್ಷ ಹಾಗೂ ಕ್ಲಬ್ ಮತ್ತು ಹೌಸ್ ನಾಯಕರಿಗೆ ಮುಖ್ಯಶಿಕ್ಷಕ ನೋಬರ್ಟ್ ಪೌಲ್ ರವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜನ ಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್ ರವರು ಮಾತನಾಡಿ ಮಕ್ಕಳು ಸಾಧನೆ ಮಾಡಲು ಜೀವನದಲ್ಲಿ ಶಿಸ್ತು ಬಹಳ ಮುಖ್ಯವೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿ ಶುಭ ಹಾರೈಸಿದರು. ಶಾಲಾ ಸಂಚಾಲಕ ವಂ.ಫಾ.ಎಲಿಯಾಸ್ ಡಿ’ಸೋಜ ಮಾತನಾಡಿ ನೂತನ ಶಾಲಾ ಸಂಸತ್ತಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಶಾಲಾ ಸಂಚಾಲಕ ಫಾ.ಎಲಿಯಾಸ್ ಡಿ’ಸೋಜ, ಮುಖ್ಯಶಿಕ್ಷಕರು ನೋಬಾರ್ಟ್ ಪೌಲ್, ವಿವೇಕ್ ವಿನ್ಸೆಂಟ್ ಪಾಯ್ಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಹಶಿಕ್ಷಕಿ ನೀತಾರವರು ನಿರೂಪಿಸಿ, ಸಹಶಿಕ್ಷಕಿ ಸುಜಾತ ಸ್ವಾಗತಿಸಿ, ಸಹಶಿಕ್ಷಕಿ ಪ್ರೀತಿ ವಂದಿಸಿದರು.