ಬೆಳ್ತಂಗಡಿ: ವಿಪರೀತ ಮಳೆಯ ಹಿನ್ನಲೆಯಲ್ಲಿ ಜಲಪಾತಗಳು ಅಪಾಯಕಾರಿ ಮಟ್ಟದಲ್ಲಿ ಧುಮ್ಮಿಕ್ಕುತ್ತಿರುವ ಕಾರಣ ತಾಲೂಕಿನಲ್ಲಿರುವ ಕಾರಣ ತಾಲೂಕಿನ ಎರ್ಮಾಯಿ, ಕಡಮಗುಂಡಿ, ಬಂಡಾಜೆ, ಬೊಳ್ಳೆ, ಎಳನೀರು ಮೊದಲಾದ ಜಲಪಾತಗಳಿಗೆ ಹಾಗೂ ಗಡಾಯಿಕಲ್ಲು ಚಾರಣಕ್ಕೆ ಜುಲೈ 4 ರಿಂದ ನಿಷೇಧವನ್ನು ಹೇರಲಾಗಿದ್ದು ಮಳೆಗಾಲದಲ್ಲಿ ಬಂಡೆಕಲ್ಲುಗಳು ಪಾಚಿ ಹಿಡಿದು ಜಾರುವ ಸ್ಥಿತಿಯಲ್ಲಿದ್ದು ಅಪಾಯವನ್ನು ತಂದೊಡ್ಡಬಹುದು ಎಂಬ ನಿಟ್ಟಿನಲ್ಲಿ ಪ್ರವಾಸಿಗರಿಗೆ ನಿಷೇಧವನ್ನು ಮಾಡಲಾಗಿದೆ.
ಇನ್ನೂ ಅನಧಿಕೃತವಾಗಿ ಪ್ರವೇಶ ಮಾಡಿದರೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಇಗಾಗಲೇ ಸೂಚನೆಯನ್ನು ನೀಡಲಾಗಿದೆ. ಇನ್ನೂ ಪ್ರವಾಸಿಗರಿಗೆ ಚಾರಣಕ್ಕೆ ಆನ್ಲೈನ್ ನೊಂದಣಿಯನ್ನು ಮುಚ್ಚಲಾಗಿದೆ. ಮಳೆಗಾಲ ಮುಗಿಯುವವರೆಗೂ ಚಾರಣವನ್ನು ನಿಷೇಧವನ್ನು ಹೇರಲಾಗಿದೆ.
ಗಡಾಯಿಕಲ್ಲು ಪ್ರದೇಶಕ್ಕೂ ಚಾರಣ ನಿರ್ಬಂಧ ವಿಧಿಸಲಾಗಿದೆ ಎಂದು ಬೆಳ್ತಂಗಡಿ ವನ್ಯಜೀವಿ ಭಾಗದ ಆರ್ ಎಫ್ ಒ ಸ್ವಾತಿ ತಿಳಿಸಿದ್ದಾರೆ.
p>