ಕಡಿರುದ್ಯಾವರ: ಧಾರಕಾರ ಮಳೆಗೆ ಎರ್ಮಳಪಲ್ಕೆ ಅಡ್ಕದ ಕರೆ ರಸ್ತೆಯ ಸಮೀಪ ಗುಡ್ಡ ಕುಸಿದು ರಸ್ತೆಗೆ ಬಿದ್ದ ಮಣ್ಣು

0

ಕಡಿರುದ್ಯಾವರ: ರಾತ್ರಿ ಸುರಿದ ಧಾರಾಕಾರ ಮಳೆಗೆ ಎರ್ಮಳ ಪಲ್ಕೆ ಅಡ್ಕದ ಕರೆ ರಸ್ತೆಯ ಬೈರೋಡಿ 1ನೇ ವಾರ್ಡಿನ 50 ಮನೆಗಳಿಗೆ ಸಂಪರ್ಕಿಸುವಲ್ಲಿ ಗುಡ್ಡ ಕುಸಿತ ಉಂಟಾಗಿ ಮಣ್ಣು ರಸ್ತೆಗೆ ಬಿದ್ದಿರುವ ಘಟನೆ ಜುಲೈ 3ರಂದು ಸಂಜೆ ನಡೆದಿದೆ.

ಈ ಘಟನೆ ಸಂಭವಿಸದ ವೇಳೆ ರಸ್ತೆ ಸಂಪೂರ್ಣ ಬಂದಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿತ್ತು.ಸಾರ್ವಜನಿಕರು ಕಳೆದ ಗ್ರಾಮ ಸಭೆಯಲ್ಲಿ ಪ್ರಸ್ತಾಪ ಮಾಡಿ ಇದರ ಬಗ್ಗೆ ಸಭೆಯಲ್ಲಿ ಹಲವು ಬಾರಿ ಮನವಿ ಮಾಡಿದ್ದಾರೆ.

ಸ್ಪಂದಿಸದ ಗ್ರಾಮ ಪಂಚಾಯತ್ ಎಂದು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ತೆರವು ಕಾರ್ಯ ನಡೆಸಿ ತಕ್ಷಣ ಸ್ಪಂದಿಸಿದ್ದಾರೆ.

LEAVE A REPLY

Please enter your comment!
Please enter your name here