ತರಬೇತಿ ಮೇಲ್ವಿಚಾರಕರಿಂದ ಬೆಳ್ತಂಗಡಿ ತಾಲೂಕಿನ 30 ವರ್ಷದಿಂದ ಪ್ರತಿ ವಾರದ ಶ್ರಮವಿನಿಮಯ ಮಾಡುತ್ತಿರುವ ಉಜಿರೆ ವಲಯದ ಮಾಯ ಕಾರ್ಯಕ್ಷೇತ್ರದ ಎಂಜಿರಿಗಿ ಸಂಘದ ಭೇಟಿ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಇದರ ವಿಸ್ತರಣಾ ಕಾರ್ಯಕ್ರಮನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ ಹೆಗ್ಗಡೆಯವರ ಮಾರ್ಗದರ್ಶನದಂತೆ ಇವರ ಗ್ರಾಮ ಕಲ್ಯಾಣದ ಕಾರ್ಯಕ್ರಮಗಳನ್ನು ರಾಜ್ಯದ ಬೇರೆ ಬೇರೆ ಗ್ರಾಮಗಳಲ್ಲಿ ಅತ್ಯುತ್ತಮವಾಗಿ ಅನುಷ್ಠಾನ ಮಾಡಲು ನೂತನವಾಗಿ ಆಯ್ಕೆಗೊಂಡ 45 ಜನ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳಿಗೆ ಇದೀಗಾಗಲೇ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ 15 ದಿನದ ಕ್ಲಾಸ್ ತರಬೇತಿಯನ್ನು ನೀಡಿದ್ದು, ಬೆಳ್ತಂಗಡಿ ತಾಲೂಕಿನ ಮಾಯ ಗ್ರಾಮದ ಎಂಜಿರಿಗಿ ಪ್ರಗತಿಬಂದು ಸಂಘದ ಭೇಟಿಯನ್ನು ಮಾಡಿ ಸದಸ್ಯರಿಂದ ಅವರ ಅನುಭವ ಹಂಚಿಕೆಯನ್ನು ಸಂವಾದದ ಮೂಲಕವಾಗಿ ಮಾಡಿಕೊಳ್ಳಲಾಯಿತು.

ಸದಸ್ಯರು ತಾನು ಝೀರೋದಿಂದ ಹೀರೋ ಆಗಿರುವ ಎಲ್ಲಾ ತನ್ನ ಅಭಿವೃದ್ಧಿಯ ಪಥವನ್ನು ಬಿಚ್ಚಿಟ್ಟರು, ಒಂದು ಸಮಯದಲ್ಲಿ ತನ್ನಲ್ಲಿ ಜಾಗ ಇದ್ದರೂ ಕೂಡ ಕೂಲಿ ಕೆಲಸವನ್ನು ಮಾಡಿ ಜೀವನ ಮಾಡುತ್ತಿದ್ದ ಈ ಸದಸ್ಯರು ತಾನು ಇದ್ದ ಪೂರ್ತಿ ಜಾಗದಲ್ಲಿ ಕೃಷಿಯನ್ನು ಮಾಡಿ ಉತ್ತಮವಾದ ಆದಾಯವನ್ನು ಪಡೆಯುತ್ತಿದ್ದು ಈಗ ತನ್ನ ಕಾಲ ಮೇಲೆ ನಿಂತು ಅಭಿವೃದ್ಧಿಯ ಬದುಕನ್ನು ಕಟ್ಟಿಕೊಂಡ ಎಲ್ಲ ಪರಿಗಳನ್ನು ವಿವರಿಸಿದರು.

ಈ ಸಂದರ್ಭ ಮಾಯ ಒಕ್ಕೂಟದ ಮಾಜಿ ಅಧ್ಯಕ್ಷ ಗಂಗಾಧರ ಸಾಲಿಯಾನ್, ಒಕ್ಕೂಟದ ನೂತನ ಅಧ್ಯಕ್ಷ ಕೃಷ್ಣಪ್ಪಗೌಡ, ಸದಸ್ಯರಾದ ಲಕ್ಷ್ಮಣ ಗೌಡ, ಬೆಲಿಯಪ್ಪ ನಾರ್ಣಪ್ಪ ಗೌಡ, ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಉಪನ್ಯಾಸಕ ಜನಾರ್ದನ, ವಲಯ ಮೇಲ್ವಿಚಾರಕಿ ವನಿತಾ, ತಾಲೂಕಿನ ಕೃಷಿ ಅಧಿಕಾರಿ ರಾಮ್ ಕುಮಾರ್ ಮಾರ್ನಾಡ್, ಸೇವಾಪ್ರತಿನಿಧಿ ಪ್ರಭಾರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here