ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೆತ್ತವರ-ಶಿಕ್ಷಕರ ಸಭೆ

0

ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಸಾಲಿನ ಪ್ರಥಮ ಹೆತ್ತವರ ಶಿಕ್ಷಕರ ಸಭೆಯನ್ನು ಶಾಲಾ ಸಂಚಾಲಕ ವಂ.ಫಾ.ಎಲಿಯಸ್ ಡಿ’ಸೋಜಾ, ಶಿಕ್ಷಕ ಪೋಷಕ ಸಮಿತಿಯ ಉಪಾಧ್ಯಕ್ಷ ಶ್ಯಾಮ್ ಸುಂದರ್ ಭಟ್, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪಾಯ್ಸ್, ಮುಖ್ಯ ಶಿಕ್ಷಕ ನೋರ್ಬರ್ಟ್ ವಿನ್ಸೆಂಟ್ ಪೌಲ್ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲಾ ಸಂಚಾಲಕ ವಂ.ಫಾ.ಎಲಿಯಸ್ ಡಿ’ಸೋಜಾ ಹಾಗೂ ಮುಖ್ಯ ಶಿಕ್ಷಕ ನೋರ್ಬರ್ಟ್ ವಿನ್ಸೆಂಟ್ ಪೌಲ್ ರವರು ಶಾಲಾ ಚಟುವಟಿಕೆ ಬಗ್ಗೆ ಪೋಷಕರಿಗೆ ತಿಳಿಸಿದರು.ಈ ಸಭೆಯ ಸಂಪನ್ಮೂಲ ವ್ಯಕ್ತಿಯಾದ ವಂ.ಫಾ.ರಿಚರ್ಡ್ ಡಿಸೋಜಾರವರು ಸಾಮಾಜಿಕ ಜಾಲತಣಗಳನ್ನು ಉಪಯೋಗಿಸುವುದರ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಿದರು.ಸಹ ಶಿಕ್ಷಕಿ ಪ್ರೇಮಾ ನಿರೂಪಿಸಿ, ಸಹ ಶಿಕ್ಷಕಿ ವೀಣಾ ಸ್ವಾಗತಿಸಿ, ಸಹ ಶಿಕ್ಷಕಿ ಅನಿತಾ ರವರು ವಂದಿಸಿದರು.

LEAVE A REPLY

Please enter your comment!
Please enter your name here