ಗುರಿಪಳ್ಳ: ಆಟೋ ರಿಕ್ಷಾ ಪಲ್ಟಿ- ಮೂವರಿಗೆ ಗಾಯ

0

ಗುರಿಪಳ್ಳ : ಕನ್ಯಾಡಿ ಗ್ರಾಮದ ಗುರಿಪಳ್ಳದ ಕೊಡ್ಡೋಲ್ ಲೋಕನಾಡು ದೇವಸ್ಥಾನದ ಬಳಿ ರಿಕ್ಷಾ ಪಲ್ಟಿಯಾಗಿ ಮೂವರು ಗಾಯಗೊಂಡು ಚಾಲಕ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ಜೂ. 23ರಂದು ನಡೆದಿದೆ.

ಚಲಿಸುತ್ತಿದ್ದ ರಿಕ್ಷಾದ ಚಕ್ರಕ್ಕೆ ರಸ್ತೆ ಬದಿ ಕಟ್ಟಲಾಗಿದ್ದ ಜಾನುವಾರಿನ ಹಗ್ಗ ಸಿಲುಕಿ ರಿಕ್ಷಾ ಪಲ್ಟಿಯಾಗಿದೆ.ರಿಕ್ಷಾ ಚಾಲಕ ಸ್ಥಳೀಯ ರಾಮಣ್ಣಗೌಡ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಿಕ್ಷಾದಲ್ಲಿ ಮಡಂತ್ಯಾರು ಸಮೀಪದ ಹೇಮಾವತಿ ಶೆಟ್ಟಿ, ಸುನಿತಾ, ಕೀರ್ತಿಕಾ, ಸನ್ಮಥ್ ಪ್ರಯಾಣಿಕರಿದ್ದು ಅವರಿಗೂ ಗಾಯಗಳಾಗಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

LEAVE A REPLY

Please enter your comment!
Please enter your name here